ದೇಶದಾದ್ಯಂತ ಕರೋನಾ ವಿರುದ್ಧ ಹೋರಾಡುತ್ತಿರುವ ಕರೋನಾ ವಾರಿಯರ್ಸ್ ವಿರುದ್ಧ ಗೂಂಡಾಗಳು ಧಾಳಿಗಳನ್ನು ಮಾಡುವ ಮೂಲಕ ಕರೋನಾ ವಿರುದ್ಧದ ಭಾರತದ ಹೋರಾಟಕ್ಕೆ ಅಡ್ಡಗಾಲು ಇಡುತ್ತಿದ್ದಾರೆ. ಕೆಲ ಬಾಹ್ಯ ಶಕ್ತಿಗಳ ಕುಮ್ಮಕ್ಕೇ ಇದಕ್ಕೆಲ್ಲ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಇದೀಗ ಕೇಂದ್ರಸರ್ಕಾರವೇ ಕರೋನಾ ಗೂಂಡಾಗಳನ್ನು ಮಟ್ಟಹಾಕಲು ಸುಗ್ರೀವಾಜ್ಞೆ ಹೊರಡಿಸಿದೆ. ಇನ್ನು ಕರೋನಾ ವಾರಿಯರ್ಸ್ ಗಳ ಮೇಲೆ ಧಾಳಿ ಮಾಡಿದವರು ಜೈಲು ಕಂಬಿ ಎಣಿಸೋದರ ಜೊತೆ ಅವರ ಕುಟುಂಬ ಬೀದಿಗೆ ಬೀಳೋದರಲ್ಲಿ ಸಂಶಯವಿಲ್ಲ.
ಕೇಂದ್ರ ಸರ್ಕಾರ ಹೊರಡಿಸಿರೋ ಸುಗ್ರೀವಾಜ್ಞೆ ಪ್ರಕಾರ ಇನ್ನು ಮುಂದೆ ಕರೋನಾ ವಾರಿಯರ್ಸ್ ಮೇಲೆ ಧಾಳಿ ಮಾಡೋದು, ಅವರು ಕರ್ತವ್ಯ ನಿರ್ವಹಿಸುವುದಕ್ಕೆ ಅಡ್ಡಿಪಡಿಸೋದು ಮಾಡಿದರೆ ಅಂತಹವರಿಗೆ 6ತಿಂಗಳಿನಿಂದ 7ವರ್ಷ ಜೈಲು ಶಿಕ್ಷೆ ಜೊತೆ 50ಸಾವಿರದಿಂದ 2ಲಕ್ಷದ ವರೆಗೆ ದಂಡ ಬೀಳಲಿದೆ
ಇನ್ನು ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡೋದು, ಧ್ವಂಸ ಮಾಡೋದು ಮಾಡಿದರೆ ಅಂತಹವರ ಆಸ್ತಿ ಮುಟ್ಟುಗೋಲು ಹಾಕಿ ಆಗಿರೋ ನಷ್ಟದ ಎರಡುಪಟ್ಟು ಹಣ ಅವರಿಂದಲೇ ವಸೂಲಿ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಲು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಲಾಗಿದ್ದು ರಾಷ್ಟ್ರಪತಿಗಳ ಸಹಿಯಾದ ನಂತರ ದೇಶವ್ಯಾಪ್ತಿ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ವೀಡಿಯೋ ನೋಡಿ,
Watch Video
WATCH: Union Minister Prakash Javadekar briefs the media after Cabinet meeting https://t.co/dWIXTlSTCK
— ANI (@ANI) April 22, 2020