fbpx

ಅಂದು ಮಗು ಕಣ್ಣೆದುರಿದ್ದರೂ ಮುಟ್ಟಲಾಗದೆ ಕಣ್ಣೀರಿಟ್ಟಿದ್ದ ತಾಯಿ 21 ದಿನಗಳ ಬಳಿಕ ಮಗುವನ್ನು ಅಪ್ಪಿ ಮುದ್ದಾಡಿದ್ದು ಹೀಗೆ, ವೀಡಿಯೋ ನೋಡಿ

ಕಳೆದ 21 ದಿನಗಳಿಂದ ಕೊರೋನ ಕ್ವಾರಂಟೈರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊರೋನಾ ವಾರಿಯರ್ಸ್ ಮೂರು ವಾರಗಳ ಬಳಿಕ ಮನೆಗೆ ಆಗಮಿಸಿದಾಗ ಅವರ ಮಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.

ಕೆಲ ದಿನಗಳ ಹಿಂದೆಯಷ್ಟೇ ಕ್ವಾರಂಟೈನ್ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿತ್ತಿರುವ ನರ್ಸ್ ಸುನಂದಾ ಅವರನ್ನು ಕಾಣಲು ಆಸ್ಪತ್ರೆ ಬಳಿ ತೆರಳಿದ್ದ ಮೂರು ವರ್ಷದ ಮಗಳು ಐಶ್ವರ್ಯ ಕಣ್ಣೀರಿಡುತ್ತಾ ಅಮ್ಮನನ್ನು ಕರೆಯುವ ವಿಡಿಯೋ ಎಲ್ಲರನ್ನೂ ಭಾವುಕರನ್ನಾಗಿಸಿತ್ತು.

ಇದೀಗ ಇನ್ನೋಂದು ವೀಡಿಯೋ ವೈರಲ್ ಆಗಿದ್ದು ತಾಯಿ ಮಗಳು 21 ದಿನಗಳ ಬಳಿಕ ಒಂದಾಗಿದ್ದಾರೆ. ಮೂರು ವಾರಗಳ ಬಳಿಕ ತನ್ನ ಮಗಳನ್ನು ತಾಯಿ ಅಪ್ಪಿ ಮುದ್ದಾಡಿದ್ದಾರೆ. ತಾಯಿಯ ಕಣ್ಣಲ್ಲಿ ಕಣ್ಣೀರು ಕಂಡ ಮಗು, ಅಳಬೇಡ ಅಮ್ಮ ಎಂದು ಅದನ್ನ ಒರೆಸುವ ದೃಷ್ಯ ನಿಜಕ್ಕೂ ಯಾರನ್ನೂ ಭಾವುಕರನ್ನಾಗಿಸುತ್ತೆ. ವೀಡಿಯೋ ನೋಡಿ,

Watch Video

error: Content is protected !!