fbpx

Please assign a menu to the primary menu location under menu

ಬೋರ್ ಆಗ್ತಿದೆಯೆಂದು ಸೂಟ್‍ಕೇಸ್‍ನಲ್ಲಿ ಗೆಳೆಯನನ್ನ ತುಂಬ್ಕೊಂಡು ಬಂದ ಭೂಪ ಸಿಕ್ಕಿಬಿದ್ದಿದ್ಹೇಗೆ ಗೊತ್ತೇ? ವೀಡಿಯೋ ನೋಡಿ

ಮಂಗಳೂರಿನಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಗೆಳೆಯನನ್ನು ದೊಡ್ಡದಾದ ಸೂಟ್ಕೇಸ್ನಲ್ಲಿ ಕೂರಿಸಿ ಮುಚ್ಚಿ ಅದನ್ನು ಅಪಾರ್ಟ್ಮೆಂಟ್ಗೆ ಹೊತ್ತೊಯ್ಯುವಾಗ ಸಿಕ್ಕಿ ಬಿದ್ದಿದ್ದಾನೆ.

ನಗರದ ಆರ್ಯಸಮಾಜ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದೆ. ಅಪಾರ್ಟ್ಮೆಂಟ್ನಲ್ಲಿ ವಿದ್ಯಾರ್ಥಿಯೊಬ್ಬ ವಾಸವಾಗಿದ್ದ. ಲಾಕ್ಡೌನ್ ಹಿನ್ನೆಲೆಯಲ್ಲಿ ಅಪಾರ್ಟ್ಮೆಂಟ್ಗೆ ಹೊರಗಿನವರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಅಲ್ಲದೆ ಪ್ರವೇಶ ದ್ವಾರದಲ್ಲೇ ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದರು. ವಿದ್ಯಾರ್ಥಿಗೆ ಒಬ್ಬನೇ ಕಾಲ ಕಳೆಯುವುದು ಕಷ್ಟವಾಗಿ ತನ್ನ ಗೆಳೆಯನಿಗೆ ಕರೆ ಮಾಡಿ ಅಪಾರ್ಟ್ಮೆಂಟ್ನಲ್ಲಿರುವ ಕೊಠಡಿಗೆ ಬರುವಂತೆ ಸೂಚಿಸಿದ. ಆತ ಅಪಾರ್ಟ್ಮೆಂಟ್ ಪ್ರವೇಶದ್ವಾರದ ಬಳಿ ಬರುವುದಾಗಿ ತಿಳಿಸಿದ.

ಇತ್ತ ವಿದ್ಯಾರ್ಥಿ ದೊಡ್ಡದಾದ ಸೂಟ್ಕೇಸ್ ತೆಗೆದುಕೊಂಡು ಹೋಗಿದ್ದ. ಅದರಲ್ಲಿ ತನ್ನ ಸ್ನೇಹಿತನನ್ನು ಮಲಗಿಸಿ ಮುಚ್ಚಿದ ಯಾರಿಗೂ ಕಾರಣದಂತೆ ಸೂಟ್ಕೇಸ್ ಅನ್ನು ಅಪಾರ್ಟ್ಮೆಂಟ್ ಕೊಠಡಿಗೆ ಹೊಯ್ಯುತ್ತಿದ್ದ. ಈ ವೇಳೆ ಸೂಟ್ ಅಲುಗಾಡಿತು.

ಸ್ಥಳದಲ್ಲೇ ಇದ್ದ ಭದ್ರತಾ ಸಿಬ್ಬಂದಿಗೆ ಅನುಮಾನ ಬಂದು ಸೂಟ್ಕೇಸ್ ಕೆಳಗಿಸಿ ಪರಿಶೀಲಿಸಿದಾಗ ಯುವಕನೊಬ್ಬ ಇದ್ದ. ಇದರಿಂದ ಗಾಬರಿಗೊಂಡ ಭದ್ರತಾ ಸಿಬ್ಬಂದಿ ಇಬ್ಬರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!