fbpx

ಕೊರೋನಾ ಓಡಿಸಲು ಒಂಟೆಯನ್ನು ಬಳಸಿ ‘ಸ್ಯಾನಿಟೈಸರ್ ಸ್ಪ್ರೇ’ ಸಿಂಪಡಿಸುತ್ತಿರುವ ಪಾಕಿಸ್ತಾನ, ಟ್ರೋಲ್ ಗೆ ಒಳಗಾದ ವೈರಲ್ ವೀಡಿಯೋ ನೋಡಿ

ಪ್ರಪಂಚದಾದ್ಯಂತ ಕೊರೋನಾ 80ಸಾವಿರಕ್ಕೂ ಅಧಿಕ ಜನರನ್ನು ಬಲಿತೆಗೆದುಕೊಂಡಿದೆ. ಕೊರೋನಾ ತಡೆಯಲು ಎಲ್ಲಾ ದೇಶಗಳು ತಮ್ಮ ಶಕ್ತಿ ಸಾಮರ್ಥ್ಯ ಮೀರಿ ಪ್ರಯತ್ನಿಸುತ್ತಿದೆ. ಕೊರೋನಾದಿಂದ ತನ್ನ ಜನರನ್ನು ಕೊರೋನಾ ಸೋಂಕಿನಿಂದ ರಕ್ಷಿಸಲು ಅವರಿಗೆ ಬೇಕಾದ ಎಲ್ಲಾ ರೀತಿಯ ಸಹಾಯಗಳನ್ನು ಆಯಾ ದೇಶಗಳು ಮಾಡುತ್ತಿವೆ.

ಆದರೆ ನೆರೆಯ ಪಾಕಿಸ್ತಾನ ಮಾತ್ರ ಕೊರೋನಾ ಬಗ್ಗೆ ಇನ್ನೂ ಸರಿಯಾಗಿ ಎಚ್ಚೆತ್ತುಕೊಂಡಿಲ್ಲ. ಮೊದಲೇ ಆರ್ಥಿಕ ಸಂಕಷ್ಟದಿಂದ ಭಿಕ್ಷುಕರಾಗಿರುವ ಪಾಕಿಸ್ತಾನ ಇದೀಗ ಕೊರೋನಾ ಮಾರಿಗೆ ತತ್ತರಿಸಿಹೋಗಿದೆ. ಚೀನಾದಿಂದ ಸಹಾಯ ಯಾಚಿಸಿದರೆ ಅವರು ಅಂಡವೇರ್ ನಿಂದ ಮಾಸ್ಕ್ ಕಳುಹಿಸಿ ಪಾಕಿಸ್ತಾನೀಯರಿಗೆ ಮುಜುಗರ ಉಂಟು ಮಾಡಿದ್ದರು. ಪಾಕಿಸ್ತಾನದ ಕೆಲ ಕ್ರಿಕೆಟರ್ ಗಳು ಭಾರತದಿಂದ 10ಸಾವಿರ ವೆಂಟಿಲೇಟರ್, ಕೊರೋನಾ ಹೋರಾಟಕ್ಕೆ ಬೇಕಾದ ಕಿಟ್ ಗಳನ್ನು ಕಳುಹಿಸುವಂತೆ ಅಂಗಲಾಚಿದ್ದು, ಅದನ್ನ ಭಾರತ ನಿರಾಕರಿಸಿತ್ತು.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಕೊರೋನಾ ವೈರಸ್ ತಡೆಗಟ್ಟಲು ಪಾಕಿಸ್ತಾನ ಒಂಟೆಯನ್ನು ಬಳಸಿಕೊಂಡು ಸ್ಯಾನಿಟೈಸರ್ ಸ್ಪ್ರೇ ಮಾಡುತ್ತಿದೆ. ಸ್ಯಾನಿಟೈಸರ್ ಯಂತ್ರವನ್ನು ಒಂಟೆಯ ಬೆನ್ನ ಮೇಲೆ ಇಟ್ಟು ಬೀದಿಬೀದಿಗಳಿಗೆ ಸ್ಯಾನಿಟೈಸರ್ ಮಾಡಿಸುತ್ತಿದ್ದು ಜನರಿಂದ ಟ್ರೋಲ್ ಗೆ ಒಳಗಾಗಿದೆ. ಸ್ಯಾನಿಟೈಸರ್ ವಾಹನ ಖರೀದಿಸಲಾಗದಷ್ಟು ಪಾಕಿಸ್ತಾನ ಭಿಕಾರಿಯಾಯಿತೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

Watch Video

error: Content is protected !!