fbpx

Please assign a menu to the primary menu location under menu

ತಬ್ಲಿಘಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಾರಿಗೂ ತಿಳಿಸದೆ ಮುಚ್ಚಿಟ್ಟ ಕಾಂಗ್ರೆಸ್ ಮುಖಂಡನ ಇಡೀ ಕುಟುಂಬಕ್ಕೆ ವಕ್ಕರಿಸಿತು ಕೊರೋನಾ

ದೆಹಲಿಯ ಕಾಂಗ್ರೆಸ್ ಮುಖಂಡನೋರ್ವ ತಬ್ಲಿಘಿ ಜಮಾತ್‌ ಕಾರ್ಯಕ್ರಮಕ್ಕೆ ತೆರಳಿ ಮಾಹಿತಿ ನೀಡದಿದ್ದ ಆತಮ ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ಆವರಿಸಿದೆ. ಇಡೀ ದೇಶದಕ್ಕೆ ಕೊರೊನಾ ಹರಡಲು ಹಾಟ್‌ಸ್ಪಾಟ್‌ ಆಗಿದ್ದ ದೆಹಲಿ ತಬ್ಲಿಘಿ ಜಮಾತ್ ಮರ್ಕಜ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಹೋಗಿಯೂ ಪೊಲೀಸರಿಗೆ ಮಾಹಿತಿ ನೀಡದೆ ಅಡಗಿ ಕುಳಿತಿದ್ದ ಕಾಂಗ್ರೆಸ್ ಮುಖಂಡನಿಗೆ ಈಗ ಕೊರೊನಾ ವಕ್ಕರಿಸಿದೆ.

ಮಾಜಿ ರಾಜಕಾರಣಿ, ಅವರ ಪತ್ನಿ ಈಗ ಆ ಪ್ರದೇಶದ ಕೌನ್ಸಿಲರ್ ಕೂಡ ಆಗಿದ್ದಾರೆ, ಹಾಗೂ ಅವರ ಮಗಳಿಗೆ ಕೊರೊನಾ ತಗುಲಿದೆ. ಅವರ ನಿರ್ಲಕ್ಷ್ಯದಿಂದಲೇ ಈ ರೀತಿಯಾಗಿದೆ ಎಂದು ಪೊಲೀಸರು ತಿಳಿಸಿದ್ದು, ಅವರಿರುವ ದೀನ್‌ಪುರವನ್ನು ಸೀಲ್ ಮಾಡಲಾಗಿದೆ. ಮೂವರನ್ನು ಅಂಬೇಡ್ಕರ್ ಆಸ್ಪತ್ರೆಗೆ ಸೇರಿಸಲಾಗಿದೆ.

ಯಾರ್ಯಾರು ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿದ್ದಿರಿ ಎಂದು ಪೊಲೀಸರು ಕೇಳುವಾಗ ವಿಚಾರವನ್ನು ತಾವು ಕೂಡ ಹೋಗಿದ್ದ ವಿಚಾರವನ್ನು ಮುಚ್ಚಿಟ್ಟಿದ್ದರು. ಆದರೆ ಕೊರೊನಾ ಅದನ್ನು ಬಯಲಿಗೆಳೆದಿದೆ. ಪೋಲೀಸರು ಕಾಂಗ್ರೆಸ್ ಮುಖಂಡನ ವಿರುದ್ಧ ಸೆಕ್ಷನ್-188, ಸೆಕ್ಷನ್-269 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದೀಗ ಆತನಿಂದಾಗಿ ದೀನಪುರ ಪ್ರದೇಶದ 250 ಮನೆಗಳನ್ನು ಸೀಲ್ ಮಾಡಲಾಗಿದೆ. ಅವರ್ಯಾರು ಮನೆಬಿಟ್ಟು ಹೊರ ಬರುವಂತಿಲ್ಲ. ದೆಹಲಿಯಲ್ಲಿ ಒಟ್ಟು 720 ಕೊರೊನಾ ಪ್ರಕರಣಗಳು ದಾಖಲಾಗಿದ್ದು 12 ಮಂದಿ ಮೃತಪಟ್ಟಿದ್ದಾರೆ. ದೆಹಲಿ ಶೇ.60ರಷ್ಟು ಕೊರೊನಾ ಪ್ರಕರಣಗಳು ತಬ್ಲಿಘಿ ಜಮಾತ್ ಕಾರ್ಯಕ್ರಮದಿಂದಲೇ ಹುಟ್ಟಿಕೊಂಡಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

error: Content is protected !!