ಪ್ರಪಂಚದಾದ್ಯಂತ ಅನೇಕ ಜನರ ಸಾವಿಗೆ ಕಾರಣವಾಗಿರುವ ಕೊರೋನಾ ವೈರಸ್ ಎಂಬ ಸಾಂಕ್ರಾಮಿಕ ರೋಗವನ್ನು ಎದುರಿಸಲು ದೇಶದಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವ ಅಗತ್ಯವಿದೆ. ಆದರೆ ಕೆಲವು ಮತೀಯ ಶಕ್ತಿಗಳು ಇದಕ್ಕೆ ಸಹಕರಿಸುತ್ತಿಲ್ಲ. ಹೌದು, ಹಲವಾರು ಮತೀಯ ಶಕ್ತಿಗಳು ಟಿಕ್ಟಾಕ್ ವಿಡಿಯೋಗಳನ್ನು ಮಾಡುವ ಮೂಲಕ ಕೊರೊನಾಗೆ ಹೆದರಬೇಡಿ, ಮಾಸ್ಕ್ ಹಾಕಬೇಡಿ, ನಮ್ಮ ದೇವರು ಕಾಪಾಡ್ತಾನೆ ಎಂಬ ತಪ್ಪು ಸಂದೇಶ ರವಾನಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಬಂಗಾಳಿ ಮೂಲದ ಮುಸ್ಲಿಂ ಧಾರ್ಮಿಕ ಮೌಲ್ವಿಯೊಬ್ಬನ ವಿಡಿಯೋ ಇದೀಗ ವೈರಲ್ ಆಗುತ್ತಿದೆ. “ನಮ್ಮ ದೇವರು ಕಳುಹಿಸಿರುವ ಈ ಕೋರೊನಾ ವೈರಸ್ ಭಾರತದಲ್ಲಿ 50 ಕೋಟಿ ಜನರನ್ನು ಒಂದೇ ಬಾರಿಗೆ ಕೊಲ್ಲಲು ಬಂದಿದೆ” ಎಂಬ ಹೇಳಿಕೆ ನೀಡಿದ್ದಾನೆ. ಈ ವೀಡಿಯೊದಲ್ಲಿ ಮೌಲಾನಾ ದೆಹಲಿಯಲ್ಲಿನ ಗಲಭೆಗಳನ್ನು ಉಲ್ಲೇಖಿಸಿ ಬಂಗಾಳಿ ಭಾಷೆಯಲ್ಲಿ ಮಾತನಾಡಿದ್ದು ಅದರಲ್ಲಿ “ಇತ್ತೀಚೆಗೆ ಮಸೀದಿಗಳಿಗೆ ಬೆಂಕಿ ಹಚ್ಚಲಾಗುತ್ತಿದೆ ಎಂಬ ಸುದ್ದಿ ನನಗೆ ಬಂದಿದೆ. ಕಳೆದ ಎರಡು ದಿನಗಳಿಂದ ಕೊರೋನಾ ಕಾರಣಕ್ಕೆ ಮಸೀದಿಗಳನ್ನು ಮುಚ್ಚಲಾಗುತ್ತಿದೆ. ಒಂದು ತಿಂಗಳು ಕಾದು ನೋಡಿ ಏನಾಗುತ್ತೆ ಎಂದು. ನಮ್ಮ ದೇವರು ನಮ್ಮ ಪ್ರಾರ್ಥನೆಯನ್ನು ಕೇಳಿಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾನೆ.
ಭಾರತದಲ್ಲಿ ಹತ್ತರಿಂದ ಐವತ್ತು ಕೋಟಿ ಜನರು ಸಾಯುವಂತಹ ಭಯಾನಕ ವೈರಸನ್ನು ನಮ್ಮ ದೇವರು ಭಾರತಕ್ಕೆ ಕಳುಹಿಸಲಿ. ಇದು ಆನಂದಕರ ವಿಷಯ ಎಂದಾಗ ಅಲ್ಲಿ ನೆರದಿದ್ದ ಪ್ರೇಕ್ಷಕರು ಮೌಲ್ವಿಯ ಹೇಳಿಕೆಯನ್ನು ಶ್ಲಾಘಿಸಿ ಚಪ್ಪಾಳೆ ತಟ್ಟಿದ್ದಾರೆ.
ಕೊರೋನಾದಿಂದ ನಾವು (ಮುಸ್ಲಿಮರು) ಸಾಯುತ್ತಿವೊ, ಬದುಕುತ್ತವೊ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಆದರೆ ನಾವು ಸಾಯುವಾಗ ಖಂಡಿತವಾಗಿಯೂ ಹಿಂದೂಗಳನ್ನು ನಮ್ಮೊಂದಿಗೆ ಕರೆದೊಯ್ಯುತ್ತೇವೆ ಎಂದು ಹೇಳಿದ್ದಾನೆ. ಈ ಮೌಲ್ವಿಯನ್ನು ಅಬ್ಬಾಸ್ ಸಿದ್ದಿಕಿ ಎಂಬ ಹೆಸರಿನಿಂದ ಗುರುತಿಸಲಾಗಿದ್ದು, ಫೆಬ್ರವರಿ 26 ರಿಂದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. Source
Watch Video
And they call us Islamophobic pic.twitter.com/fY5HJY9xZC
— desi mojito (@desimojito) April 1, 2020