ಕೊರೋನಾ ತಡೆಗಟ್ಟಲು ಪ್ರಧಾನಿ ಮೋದಿಯವರು ತಂದ ನಿಯಮಗಳನ್ನು ಪಾಲನೆ ಮಾಡುವಂತೆ ಕಾಶ್ಮೀರದ ಜನತೆಗೆ ಅಲ್ಲಿನ ಹುಡುಗಿಯೊಬ್ಬಳು ಮನವಿ ಮಾಡಿದ್ದಾಳೆ. ಎಲ್ಲರೂ ಒಗ್ಗಟ್ಟಾಗಿ ದೇಶದ ಈ ಕಠಿಣ ಪರಿಸ್ಥಿತಿಯನ್ನು ಎದುರಿಸುವಂತೆಯೂ ಆಕೆ ಹೇಳಿರುವ ವಿಡಿಯೋವನ್ನು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.
ಅಂದ ಹಾಗೆ ಈ ಹುಡುಗಿಯ ಹೆಸರು ರಿಫಾತ್. ಕಣಿವೆ ರಾಜ್ಯದ ಬಾರಾಮುಲ್ಲಾದ ಈಕೆ ಹತ್ತನೇ ತರಗತಿ ವಿದ್ಯಾರ್ಥಿನಿ. ರಾಷ್ಟ್ರದ ಹಿತಕ್ಕಾಗಿ ಮೋದಿ ತಿಳಿಸಿದ ಎಲ್ಲಾ ನಿಯಮಗಳನ್ನೂ ಅನುಸರಿಸಿ, ವೀರೋಧಗಳನ್ನೆಲ್ಲಾ ಪಕ್ಕಕ್ಕಿಟ್ಟು ಕೋವಿಡ್-19 ನಿಂದ ದೇಶವನ್ನು ರಕ್ಷಿಸಿಕೊಳ್ಳುವುದಕ್ಕೆ ಕೈ ಜೋಡಿಸುವಂತೆ ತಿಳಿಸಿದ್ದಾಳೆ. ಅಲ್ಲದೆ ಜಾತಿ ಧರ್ಮದ ಹಂಗನ್ನು ಮೀರಿ ದೇಶವನ್ನು ಉಳಿಸಲು ಜಕಾತ್ ಅಂದರೆ ದೇಣಿಗೆ ನೀಡುವಂತೆಯೂ ಈಕೆ ಮನವಿ ಮಾಡಿದ್ದಾಳೆ.
ಈ ಸಂದರ್ಭದಲ್ಲಿ ಬಡವರಿಗೆ ಸಹಾಯ ನೀಡುವಂತೆಯೂ ತಿಳಿಸಿರುವ ಆಕೆ, ಎಲ್ಲರೂ ಒಗ್ಗಟ್ಟಾಗಿ ಈ ಯುದ್ಧವನ್ನು ಗೆಲ್ಲೋಣ ಎಂಬ ಸಂದೇಶ ನೀಡಿದ್ದಾಳೆ. ಅಲ್ಲದೆ ಸೋಂಕು ಹರಡದಂತೆ ತಪ್ಪಿಸಲು ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿದ್ದಾಳೆ. ಆ ಮೂಲಕ ಮೋದಿ ಜೊತೆಗೆ ಹೆಜ್ಜೆ ಹಾಕುವಂತೆ ತಿಳಿಸಿ ಇದೀಗ ಮನೆ ಮಾತಾಗಿದ್ದಾಳೆ.
#Baramulla, #Kashmir valley से Rifat/रिफत दसवीं क्लास छात्रा! Appeals to all, across community lines, to heed PM Sh @narendramodi ‘s advice. pic.twitter.com/dKRwcQZFxk
— Dr Jitendra Singh (@DrJitendraSingh) April 7, 2020