fbpx

ಚಿಕಿತ್ಸೆಗೆ ಬರಲೊಪ್ಪದ ತಬ್ಲಿಘಿಯನ್ನು ಎತ್ತಾಕಿಕೊಂಡು ಹೋದ ತಮಿಳುನಾಡು ಪೋಲೀಸರು, ವೈರಲ್ ವೀಡಿಯೋ ನೋಡಿ

ಕೊರೋನಾ ಹಾಟ್-ಸ್ಪಾಟ್ ಆಗಿ ಗುರುತಿಸಿಕೊಂಡಿರುವ ದೆಹಲಿಯ ನಿಜಾಮುದ್ದೀನ್ ಮಸೀದಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಬ್ಲಿಘಿಗಳನ್ನು ಸ್ವಯಂಪ್ರೇರಿತರಾಗಿ ಚಿಕಿತ್ಸೆಗೆ ದಾಖಲಾಗುವಂತೆ ಕೇಳಿಕೊಂಡರೂ ಕೆಲವರು ಆದೇಶಕ್ಕೆ ಬೆಲೆಯೇ ಕೊಡುತ್ತಿಲ್ಲ. ತಮಿಳುನಾಡಿನಿಂದ ಈ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಮುಸ್ಲಿಮರು ಪಾಲ್ಗೊಂಡಿದ್ದರು, ಇವರಲ್ಲಿ ಬಹುತೇಕರಿಗೆ ಕೋರೋನಾ ಸೋಂಕು ಅಂಟಿರುವುದು ದೃಢವಾಗಿದೆ. ಆದರೆ ಇನ್ನೂ ಕೆಲವರು ಅಡಗಿಕೂತಿದ್ದು, ಸೋಂಕು ಪತ್ತೆ ಪರೀಕ್ಷೆಗೆ ಆಗಮಿಸಿಲ್ಲ.

ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ದೆಹಲಿಯ ನಿಜಾಮುದ್ದೀನ್ ಮಸೀದಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಮಿಳುನಾಡಿನ ಮುಸ್ಲಿಂ ವ್ಯಕ್ತಿಯೊಬ್ಬ ಸೋಂಕು ಇದೆಯೇ ಪರೀಕ್ಷಿಸಲು ಬರುವಂತೆ ಪೋಲೀಸರು ಎಷ್ಟೇ ಕೇಳಿಕೊಂಡರೂ ಬರದೆ ಉದ್ದಟತನ ತೋರಿದ್ದಾನೆ. ಕೊನೆಗೆ ಪೋಲೀಸರು ಬಲವಂತವಾಗಿ ಆತನನ್ನು ಎತ್ತಾಕಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಇನ್ನೂ ಅನೇಕ ತಬ್ಲಿಘಿಗಳು ಕಣ್ಮರೆಯಾಗಿದ್ದು, ಪತ್ತೆಕಾರ್ಯ ಮುಂದುವರೆದಿದೆ. ವೀಡಿಯೋ ನೋಡಿ,

ಇದನ್ನೂ ಓದಿ:  ಅಂದದ ಗುಲಾಬಿ ಮೇಲೆ ಚೆಂದದ ಹಾವು, ಹತ್ತಿರ ಹೋದರೆ ಗ್ಯಾರಂಟಿ ಸಾವು! ವೈರಲ್ ವಿಡಿಯೋ ನೋಡಿ


Continue Reading

Trending Short Videos

close

This will close in 26 seconds

error: Content is protected !!