fbpx

Please assign a menu to the primary menu location under menu

ತಮ್ಮ ಏರಿಯಾಗೆ ಬಂದ ಕೊರೋನಾ ವಾರಿಯರ್ಸ್ ಗೆ ಈ ಮುಸ್ಲಿಂ ವ್ಯಕ್ತಿ ಮಾಡಿದ್ದೇನು ನೋಡಿ, ವೈರಲ್ ವೀಡಿಯೋ

ದೇಶದಲ್ಲಿ ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೋಲೀಸರು, ವೈದ್ಯರು, ನರ್ಸ್ ಗಳು, ಸ್ವಚ್ಚತಾ ಸಿಬ್ಬಂದಿಗಳನ್ನು ಕೊರೋನಾ ವಾರಿಯರ್ಸ್ ಎಂದೇ ಕರೆಯಲಾಗುತ್ತಿದೆ. ಆದರೆ ದೆಹಲಿಯ ನಿಜಾಮುದ್ದಿನ್ ಮಸೀದಿಯ ಘಟನೆಯ ನಂತರ ದೇಶದ ಕೆಲವೆಡೆಗಳಲ್ಲಿ ಕೆಲ ಮತಾಂಧ ಕಿಡಿಗೇಡಿಗಳು ಇವರ ಮೇಲೆ ದಾಳಿ ಮಾಡಿದ್ದು ಇಡೀ ಮುಸ್ಲಿಂ ಸಮುದಾಯದ ಮೇಲೆ ಪರಿಣಾಮ ಬೀರಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದು, ಮುಸ್ಲಿಂ ವ್ಯಕ್ತಿಯೊಬ್ಬ ತಮ್ಮ ಏರಿಯಾಗೆ ಆಗಮಿಸಿದ ಸ್ವಚ್ಚತಾ ಸಿಬ್ಬಂದಿಗೆ ನೋಟಿನ ಹಾರ ಹಾಕಿದ್ದಲ್ಲದೆ, ಸನ್ಮಾನ ಮಾಡೋ ಮೂಲಕ ಸತ್ಕರಿಸಿದ್ದಾನೆ. ಸುತ್ತಮುತ್ತಲಿನ ಮನೆಯವರು ಚಪ್ಪಾಳೆ ತಟ್ಟುವ ಮೂಲಕ ಕೊರೋನಾ ವಾರಿಯರ್ಸ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ವೈರಲ್ ವೀಡಿಯೋ ನೋಡಿ,

error: Content is protected !!