ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸ್ವಪಕ್ಷದ ಕಾರ್ಯಕರ್ತರೇ ತಿರುಗಿಬಿದ್ದಿದ್ದಾರೆ. ಸೋಮವಾರದಂದು ಅವರು ಮಾಧ್ಯಮಕ್ಕೆ ನೀಡಿದ ಒಂದು ಹೇಳಿಕೆ ಇಷ್ಟೆಲ್ಲ ಆವಾಂತರಕ್ಕೆ ಕಾರಣವಾಗಿರೋದು.
ದೇಶಾದ್ಯಂತ ಕೊರೋನಾ ಪ್ರಕರಣ ಏರಿಕೆಗೆ ಕಾರಣವಾದ ತಬ್ಲಿಘಿ ಜಮಾತ್ ಕಾರ್ಯಕ್ರಮ ಮತ್ತು ಅದರ ನಂತರ ಪೋಲೀಸರು, ವೈದ್ಯರ ಮೇಲೆ ಜಮಾತಿಗಳು ನಡೆಸಿದ ಧಾಳಿ, ಹಲ್ಲೆ ಪ್ರಕರಣಗಳನ್ನು ವಿರೋಧಿಸಿ ಹಿಂದೂ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಾ ಇದ್ದರು. ಇದೀಗ ಯಡಿಯೂರಪ್ಪನವರು ಈ ರೀತಿ ಮುಸ್ಲಿಮರ ವಿರುದ್ಧ ಮಾತನಾಡೋದು ಮುಂದುವರೆಸಿದ್ರೆ ಕಠಿಣ ಕ್ರಮ ತೆಗೆದುಕೊಳ್ಳೋದಾಗಿ ಎಚ್ಚರಿಸಿದ್ದಾರೆ. ಇದು ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಕಣ್ಣು ಕೆಂಪಾಗಿಸಿದೆ.
ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಹಿಂದೂ, ಬಿಜೆಪಿ ಕಾರ್ಯಕರ್ತರು ಏನಾದರೂ ಮಾತನಾಡಿದರೆ ಕೇಸು ಹಾಕಿ ಜೈಲಿಗೆ ಹಾಕಿಸುತ್ತಿತ್ತು. ಆವಾಗ ಇದೇ ಬಿಜೆಪಿ ನಾಯಕರು ವಾಕ್ ಸ್ವಾತಂತ್ರ್ಯದ ಬಗ್ಗೆ ದೊಡ್ಡದೊಡ್ಡದಾಗಿ ಟಿಪ್ಪಣಿ ಕೊಡುತ್ತಿದ್ದರು. ಇದೀಗ ಅದೇ ಬಿಜೆಪಿ ತಮ್ಮದೇ ಕಾರ್ಯಕರ್ತರ ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳಲು ಹೊರಟಿದೆ.
ಮತಾಂಧರು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವತೆಗಳ ನಿಂಧನೆ, ದೇಶದ ಪ್ರಧಾನಿಗಳನ್ನು ನಿಂಧಿಸಿ ಪೋಸ್ಟ್ ಗಳನ್ನು ಹರಿಬಿಟ್ಟಾಗ ತುಟಿಬಿಚ್ಚದ ಬಿಜೆಪಿ ನಾಯಕರು, ಇದೀಗ ಅದೇ ಮತಾಂಧರ ಕೃತ್ಯಗಳ ಬಗ್ಗೆ ಮಾತನಾಡಿದರೆ ಜೈಲಿಗೆ ಅಟ್ಟೋದಾಗಿ ಬೆದರಿಕೆ ಹಾಕಿದ್ದಾರೆ.
ಇದರಿಂದ ಕೋಪಗೊಂಡಿರುವ ಬಿಜೆಪಿ ಕಾರ್ಯಕರ್ತನೋರ್ವ, “ಯಡಿಯೂರಪ್ಪನವರೆ ನೀವು ರಾಜಾಹುಲಿಯಲ್ಲ, ದರ್ಗದ ಇಲಿ” ಎಂದು ಠೀಕಿಸಿದ್ದಾನೆ. ಕಾರ್ಯಕರ್ತರ ಮೇಲೆ ಕ್ರಮಕೈಗೊಳ್ಳೋ ಮೊದಲು “ಜಮಾತಿಗರು ಕೊರೋನಾ ಜಿಹಾದ್ ಮಾಡುತ್ತಿದ್ದಾರೆ” ಎಂದ ಶೋಭಾ ಕರಂದ್ಲಾಜೆಯವರ ಮೇಲೆ ಕ್ರಮ ತೆಗೆದುಕೊಳ್ಳಿ. ನಿಮ್ಮ ಪೌರುಷ ತೋರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಡಿಯೋ ಇಲ್ಲಿದೆ ನೋಡಿ,