fbpx

ಆನ್ಲೈನ್ ನಲ್ಲಿ ವಸ್ತು ಖರೀದಿಸುವವರೆ ಎಚ್ಚರ, ಕೊರೋನಾ ವೈರಸ್ ನಿಮ್ಮ ಮನೆ ಬಾಗಿಲಿಗೆ ಉಚಿತವಾಗಿ ಡೆಲಿವರಿ ಆಗ್ತಿದೆ. ಬೆಚ್ಚಿಬೀಳಿಸೋ ವೀಡಿಯೋ ನೋಡಿ

ಆನ್ಲೈನಲ್ಲಿ ವಸ್ತು ಖರೀದಿ ಮಾಡುವವರೆ ಎಚ್ಚರ, ನಿಮ್ಮ ಆರ್ಡರ್ ಜೊತೆ ಕೊರೋನಾ ವೈರಸ್ ಪ್ರೀಯಾಗಿ ಡೆಲಿವರಿ ಮಾಡ್ತಾ ಇದ್ದಾರೆ. ಅಮೇಜಾನಲ್ಲಿ ಆರ್ಡರ್ ಮಾಡಿದ ವಸ್ತು ಡೆಲಿವರಿ ಮಾಡಲು ಬಂದಾತ, ವಸ್ತುವಿನ ಪ್ಯಾಕೇಜ್ ಮೇಲೆ ತನ್ನ ಎಂಜಲು ಉಗುಳುವ ವೀಡಿಯೋವೊಂದು ವೈರಲ್ ಆಗಿದೆ.

ಕೋರೋನಾ ಹೆಮ್ಮಾರಿ ಪ್ರಪಂಚದಾದ್ಯಂತ ತಾಂಡವವಾಡುತ್ತಿರುವಾಗಲೆ ಈ ಘಟನೆ ನಡೆದಿದ್ದು, ಆನ್ಲೈನ್ ವಸ್ತು ಖರೀದಿಸುವವರ ನಿದ್ದೆಗೆಡಿಸಿದೆ. ಘಟನೆ ನಡೆದಿರೋದು ಲಾಸ್ ಏಂಜಲೀಸ್ ನಲ್ಲಿ. ಆರ್ಡರ್ ಡೆಲಿವರಿ ಮಾಡಲು ಬಂದಿದ್ದ ವ್ಯಕ್ತಿ ಆ ಪ್ಯಾಕೇಜ್ ಮೇಲೆ ತನ್ನ ಎಂಜಲು ಅಂಟಿಸಿ ಹೋಗಿದ್ದಾನೆ.

ಪ್ಯಾಕೇಜ್ ಮೇಲೆ ನೀರಿನ ಕಲೆ ಇರೋದು ಗಮನಿಸಿದ ಮನೆಯವರು ನಾಯಿ ಏನಾದರು ಮಾಡಿರಬಹುದೆ ಎಂದು ತಮ್ಮ ಡೋರ್ ಕ್ಯಾಮರಾದಲ್ಲಿ ಸೆರೆಯಾದ ದೃಷ್ಯಗಳನ್ನು ಪರಿಶೀಲಿಸಿ ನೋಡಿದ್ದಾರೆ. ಇದರಲ್ಲಿ ಡೆಲಿವರಿ ಮಾಡಲು ಬಂದಾತ ಬಾಕ್ಸ್ ಮೇಲೆ ತನ್ನ ಎಂಜಲು ಅಂಟಿಸಿರೋದು ರೆಕಾರ್ಡ್ ಆಗಿದ್ದು ಒಂದು ಕ್ಷಣಕ್ಕೆ ಬೆಚ್ಚಿಬಿದ್ದಿದ್ದಾರೆ. ಸದ್ಯ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಆತನ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳೋದಾಗಿ ಅಮೇಜಾನ್ ಹೇಳಿದೆ. ಆತನಿಗೆ ಕೊರೋನಾ ಸೋಂಕು ಇತ್ತೇ ಎಂಬುದು ತಿಳಿದುಬಂದಿಲ್ಲ. ವೀಡಿಯೋ ನೋಡಿ,

error: Content is protected !!