fbpx

ಲಾಕ್ ಡೌನ್ ಉಲ್ಲಂಘಿಸಿ ಜಾಲಿ ರೈಡ್ ಮಾಡೋಕೆ ಹೋಗಿ ಪೋಲೀಸರ ಕೈಗೆ ತಗಲಾಕೊಂಡ್ರ ರಾಹುಲ್ – ಪ್ರಿಯಾಂಕ ಗಾಂಧಿ, ವೀಡಿಯೋ ವೈರಲ್ (Fact check)

ಕೊರೋನಾ ಸಂಬಂಧ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿದೆ. ಅಗತ್ಯ ವಾಹನಗಳ ಓಡಾಟ ಬಿಟ್ಟು ಸಾರ್ವಜನಿಕ ವಾಹನಗಳ ಓಡಾಟ ಬಹುತೇಕ ಬಂದ್ ಮಾಡಲಾಗಿದೆ. ಇದೀಗ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಲಾಕ್ ಡೌನ್ ಆದೇಶ ಧಿಕ್ಕರಿಸಿ ತಮ್ಮ ಕಾರಿನಲ್ಲಿ ಜಾಲಿರೈಡ್ ಮಾಡೋಕೆ ಹೋಗಿ ಪೋಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ವೈರಲ್ ಮಾಡಲಾಗುತ್ತಿದೆ.

ಆದರೆ ಈ ವೀಡಿಯೋ ಬಗ್ಗೆ ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ಬಯಲಾಗಿದೆ. ವೀಡಿಯೋದಲ್ಲಿ ಇರೋದು ರಾಹುಲ್ – ಪ್ರಿಯಾಂಕ ಗಾಂಧಿಯೇನೋ ನಿಜ ಆದರೆ ಘಟನೆ ನಡೆದಿರೋದು ಮಾತ್ರ ಕಳೆದ ಡಿಸೆಂಬರ್ ನಲ್ಲಿ. CAA-NRC ಗಲಭೆ ಸಂದರ್ಭದಲ್ಲಿ ಮೃತರಾದವರ ಕುಂಟುಂಬವನ್ನು ಭೇಟಿಯಾಗಲು ಉತ್ತರ ಪ್ರದೇಶದ ಮೀರತ್ ಗೆ ಹೊರಟಿದ್ದ ಇಬ್ಬರನ್ನು, ಸ್ಥಳದಲ್ಲಿ 144ಸೆಕ್ಷನ್ ಜಾರಿ ಇದ್ದ ಕಾರಣ ಪೋಲೀಸರು ತಡೆದು ವಾಪಾಸ್ ಕಳಿಸಿದ್ದರು.


Continue Reading

ಇದೀಗ ಇದೇ ವೀಡಿಯೋವನ್ನು ಲಾಕ್ ಡೌನ್ ಉಲ್ಲಂಘಿಸಿದ್ದಾರೆ ಎಂದು ವೈರಲ್ ಮಾಡಲಾಗುತ್ತಿದೆ. ವೀಡಿಯೋ ನೋಡಿ,

ಇದನ್ನೂ ಓದಿ:  ಸಿಂಹಗಳ ಗುಂಪಿನ ಜೊತೆ ಕಾದಾಡಿ ತನ್ನ ಕರುವನ್ನು ರಕ್ಷಿಸಿದ ಕಾಡೆಮ್ಮೆ! ವೈರಲ್ ವಿಡಿಯೋ ನೋಡಿ

Trending Short Videos

close

This will close in 26 seconds

error: Content is protected !!