ಮುಸ್ಲಿಂ ವ್ಯಕ್ತಿಯೊಬ್ಬರು ಹಣ್ಣು ಹಂಪಲುಗಳಿಗೆ ಎಂಜಲು ಹಚ್ಚಿ ಮಾರಾಟ ಮಾಡುತ್ತಿರುವ ವೀಡಿಯೋವೊಂದು ಕಳೆದ ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಎಗ್ಗಿಲ್ಲದೆ ವೈರಲ್ ಆಗುತ್ತಿದೆ. ಪ್ರಪಂಚದಾದ್ಯಂತ ಕೊರೋನಾ ವೈರಸ್ ಮರಣಮೃದಂಗ ಬಾರಿಸುತ್ತಿರುವ ಬೆನ್ನಲ್ಲೇ ಈ ವೀಡಿಯೋ ವೈರಲ್ ಆಗಿದ್ದರಿಂದ ದೇಶಾದ್ಯಂತ ಜನರು ಆತಂಕಕ್ಕೆ ಒಳಗಾಗಿದ್ದರು.
ವೀಡಿಯೋದಲ್ಲಿರುವ ವ್ಯಕ್ತಿ ಮಧ್ಯಪ್ರದೇಶದ ರೈಸನ್ ನಿವಾಸಿ ಶೇರು ಖಾನ್ ಎಂದು ಗುರುತಿಸಲಾಗಿದ್ದು, ಈತ ಕೊರೋನಾ ಸೋಂಕು ಹರಡಲು ಈ ರೀತಿ ಮಾಡಿದ್ದನೆ ಎಂಬ ಬಗ್ಗೆ ತಿಳಿದುಬಂದಿಲ್ಲ. ಈ ಘಟನೆ ಕಳೆದ ತಿಂಗಳು ಫೆಬ್ರವರಿ16ರಂದು ನಡೆದಿದ್ದು, ಆ ಸಂದರ್ಭದಲ್ಲಿ ಭಾರತದಲ್ಲಿ ಹಲವು ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ಸಧ್ಯ ಆರೋಪಿಯನ್ನು ಮಧ್ಯಪ್ರದೇಶ ಪೋಲೀಸರು ಬಂಧಿಸಿದ್ದಾರೆ. ಆತನ ಮೇಲೆ ಸೆಕ್ಷನ್ 269, 270ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತನಿಗೆ ಕೊರೋನಾ ಸೋಂಕು ಇದೆಯೇ ಎಂಬ ಬಗ್ಗೆ ಇನ್ನೂ ಖಚಿತವಾಗಿಲ್ಲ. ವೀಡಿಯೋ ನೋಡಿ,