ಕರೋನಾ ಸೋಂಕು ಹರಡುವಿಕೆ ತಡೆಗೆ ದೇಶವೇ ಲಾಕ್-ಡೌನ್ ನಲ್ಲಿರುವಾಗ ಕೆಲವು ಕಡೆ ಇನ್ನೂ ಜನರು ಸರ್ಕಾರದ ಆದೇಶ ಪಾಲಿಸದೆ ಉದ್ಧಟತನ ಮೆರೆಯುತ್ತಿದ್ದಾರೆ. ದೇಶದ ಹಲವು ಕಡೆ ಸರ್ಕಾರದ ಆದೇಶ ಧಿಕ್ಕರಿಸಿ ನಮಾಜ್ ಮಾಡುತ್ತಿದ್ದವರ ಮೇಲೆ ಪೋಲೀಸರು ಲಾಠಿ ಬೀಸುವ ವೀಡಿಯೋಗಳನ್ನು ನೋಡಿದ್ದೇವೆ. ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಪೂಜೆ ನೆರವೇರಿಸುತ್ತಿದ್ದ ಅರ್ಚಕನ ಮೇಲೆಯೂ ಪೋಲೀಸರು ಲಾಠಿ ಬೀಸಿದ ವೀಡಿಯೋ ಇದಾಗಿದೆ.
ಘಟನೆ ನಡೆದಿರೋದು ಮಧ್ಯಪ್ರದೇಶದ ರೀವಾದಲ್ಲಿ ನಡೆದಿದ್ದು, ಪೋಲೀಸರು ಎಚ್ಚರಿಕೆ ನೀಡಿದ ನಂತರವೂ ಪೂಜಾರಿ ಗ್ರಾಮದ ಜನರನ್ನು ಸೇರಿಸಿ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿದ್ದ. ಇದರಿಂದ ರೊಚ್ಚಿಗೆದ್ದ ಪೋಲೀಸರು ಪೂಜಾರಿಗೆ ಲಾಠಿ ರುಚಿ ತೋರಿಸಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ಈ ಘಟನೆಯನ್ನು ಖಂಡಿಸಿದೆ. ವೀಡಿಯೋ ನೋಡಿ,