fbpx

Please assign a menu to the primary menu location under menu

ಒಂದು ದಿನದ ಮಟ್ಟಿಗೆ ಲಾರಿ ಡ್ರೈವರ್ ಆದ ಸಿಂಗಂ ಖ್ಯಾತಿಯ ರವಿ.ಡಿ ಚನ್ನಣ್ಣನವರ್, ಕಾರಣವೇನು ಗೊತ್ತೇ?(ವೀಡಿಯೋ)

ಕೊರೋನಾ ಎಫೆಕ್ಟ್ ನಿಂದ ಇಡೀ ದೇಶವೇ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ತುರ್ತು ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಓಡಾಟ ತಡೆಹಿಡಿಯಲಾಗಿದೆ. ಆದರೆ ಕೆಲ ಭ್ರಷ್ಟ ಪೋಲೀಸರು, ಸಾರಿಗೆ ಅಧಿಕಾರಿಗಳು ಈ ಸಂದರ್ಭದಲ್ಲಿಯೂ ಅಗತ್ಯ ವಸ್ತುಗಳನ್ನು ಸಾಗಾಟ ಮಾಡುವ ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದರು.

ಇದರ ಬಗ್ಗೆ ತಿಳಿದ ಖಡಕ್ ಪೋಲೀಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರು ಭ್ರಷ್ಟ ಕೃತ್ಯಕ್ಕೆ ಕಡಿವಾಣ ಹಾಕಲು ಲಾರಿ ಚಾಲಕನ ವೇಷದಲ್ಲಿ ಚಾಲಕರಿಂದ ಹಣ ಪೀಕುತ್ತಿದ್ದ ಭ್ರಷ್ಟ ಆರ್ಟಿಒ ಅಧಿಕಾರಿಗಳನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಹೌದು ಅತ್ತಿಬೆಲೆಯಲ್ಲಿರುವ ಕರ್ನಾಟಕ-ತಮಿಳುನಾಡು ಗಡಿಭಾಗ ಚೆಕ್ಪೋಸ್ಟ್ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಹೋಮ್ ಗಾರ್ಡ್ ವಿವೇಕ್, ಆರ್ಟಿಒ ಇನ್ಸ್ ಪೆಕ್ಟರ್ಗಳಾದ ಕರಿಯಪ್ಪ ಮತ್ತು ಜಯಣ್ಣ ಅವರನ್ನು ಬಂಧಿಸಲಾಗಿದೆ. ಇವರಿಂದ 12,350 ರೂಪಾಯಿ ವಶಪಡಿಸಲಾಗಿದೆ ಅಷ್ಟೇ ಅಲ್ಲದೆ ಇವರನ್ನು ಸೇವೆಯಿಂದ ತೆಗೆದು ಹಾಕಲಾಗಿದೆ.

error: Content is protected !!