fbpx

ಕೊರೋನಾ ಅಲ್ಲಾಹನ ಸೈನಿಕ, ಸೋಂಕಿಗೆ ಸತ್ತ ಅನ್ಯ ಧರ್ಮೀಯರ ಸಾವನ್ನ ಸಂಭ್ರಮಿಸಿ ಎಂದು ಕರೆ ನೀಡಿದ ಮೌಲ್ವಿ, ವೀಡಿಯೋ ನೋಡಿ

ಕೊರೋನಾ ವೈರಸ್ ಪ್ರಪಂಚದಾದ್ಯಂತ ಸಾವಿರಾರು ಜನರ ಸಾವಿಗೆ ಕಾರಣವಾಗಿದೆ, ಲಕ್ಷಾಂತರ ಜನರು ಸೋಂಕಿನಿಂದ ನರಳುತ್ತಿದ್ದಾರೆ. ಇಡೀ ಪ್ರಪಂಚವೇ ಒಮ್ಮೆ ಕೊರೋನಾ ಮಾರಿಯಿಂದ ಮುಕ್ತಿ ಸಿಗಲಿ ಎಂದು ಹೋರಾಡುತ್ತಿದ್ದರೆ ಇಲ್ಲೊಬ್ಬ ಮೌಲ್ವಿ ಕೊರೋನಾದಿಂದ ಸಾವಿಗೀಡಾದ ಅನ್ಯ ಧರ್ಮೀಯರ(ಕಫೀರರ) ಸಾವನ್ನು ಸಂಭ್ರಮಿಸಿ ಎಂದು ಮುಸಲ್ಮಾನರಿಗೆ ಕರೆಕೊಟ್ಟಿದ್ದಾನೆ.

ಈ ವೀಡಿಯೋದಲ್ಲಿರುವ ಮೌಲ್ವಿ ‘ಜಮೀಲ್ ಅಲ್ ಮುತಾವಾ’ ಇಸ್ಲಾಮಿಕ್ ಭಯೋತ್ಪಾದನೆಗೆ ಹೆಸರುವಾಸಿಯಾಗಿರುವ ಗಾಜಾದವನಾಗಿದ್ದು, ಕೊರೋನಾ ವೈರಸ್ ಅನ್ನು ಭೂಮಿಗೆ ‘ಅಲ್ಲಾಹ’ ಕಳುಹಿಸಿದ್ದು ಎಂದಿರುವ ಆತ, ಈ ವೈರಸ್ ಅಲ್ಲಾನ ಸೈನಿಕ, ಕಫೀರರನ್ನು ನಾಶ ಮಾಡಲು ಇದನ್ನು ಆತ ಕಳುಹಿಸಿದ್ದಾನೆ ಎಂದು ಹೇಳಿದ್ದಾನೆ. ಕೊರೋನಾ ವೈರಸ್ ಗೆ ಸಾವಿಗೀಡಾಗಿರುವ ಅಮೇರಿಕಾ, ಚೀನಾ ಇಟಲಿ, ಫ್ರಾನ್ಸ್ ಹಾಗೂ ಇತರ ಯುರೋಪಿಯನ್ ದೇಶಗಳ ಜನರ ಸಾವನ್ನ ಸಂಭ್ರಮಿಸಿ ಎಂದು ಕರೆಕೊಟ್ಟಿದ್ದಾನೆ.

ಇರಾನ್ ನಲ್ಲಿ ಸತ್ತಿರುವ ಶಿಯಾ ಮುಸ್ಲಿಮರನ್ನು ಕೂಡ ಅನ್ಯ ಧರ್ಮೀಯರ ಸಾಲಿಗೆ ಸೇರಿಸಿರುವ ಈತ, ಶಿಯಾಗಳು ಮುಸ್ಲಿಮರಲ್ಲ ಹಾಗಾಗಿ ಅವರ ಸಾವನ್ನೂ ಸಂಭ್ರಮಿಸಿ ಎಂದಿದ್ದಾನೆ. ಈ ವೀಡಿಯೋ ಈಗ ಪ್ರಪಂಚದಾದ್ಯಂತ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ವೀಡಿಯೋ ನೋಡಿ,

error: Content is protected !!