fbpx

ಬೆಂಗಳೂರಿನ ಸಾದಿಕ್ ನಗರದಲ್ಲಿ ಜನರ ಆರೋಗ್ಯ ತಪಾಸಣೆಗೆ ತೆರಳಿದ್ದ ಆಶಾ ಕಾರ್ಯಕರ್ತೆಯನ್ನು ಅಟ್ಟಾಡಿಸಿ ಹೊಡೆದ ಮತಾಂಧರು, ವೀಡಿಯೋ ನೋಡಿ

ಕೊರೋನಾ ವೈರಸ್ ತಡೆಗೆ ಹೆಲ್ತ್ ಸರ್ವೇ ಕಾರ್ಯ ನಡೆಸುತ್ತಿರುವ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಹೆಗಡೆ ನಗರ ಸಮೀಪ ಬರುವ ಸಾರಾಯಿಪಾಳ್ಯದ ಸಾದಿಕ್ ನಗರದಲ್ಲಿ ನಡೆದಿದೆ.

ಕೊರೋನಾ ವೈರಸ್ ಹರಡೋದನ್ನ ತಡೆಯಲು ಕಳೆದ 15 ದಿನಗಳಿಂದ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರು ಮನೆಮನೆಗಳಿಗೆ ತೆರಳಿ ಜನರಿಂದ ನೆಗಡಿ, ಜ್ವರ, ಕೆಮ್ಮು ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಅಂತೆಯೇ ಬುಧವಾರ ಕೂಡ ಮಾಹಿತಿ ಪಡೆಯುತ್ತಿದ್ದಾಗ ಗ್ಯಾಂಗ್ ಒಂದು ನರ್ಸ್ ಹಾಗೂ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಿದೆ.

ಆಶಾ ಕಾರ್ಯಕರ್ತೆಯರು ಜನರಿಂದ ಸಂಗ್ರಹಿಸಿದ್ದ ರಿಪೋರ್ಟ್ ಗಳನ್ನು ಹರಿದು ಜೀವಬೆದರಿಕೆ ಹಾಕಿರೋ ಪುಂಡರು, ಅವರಿಂದ ಫೋನ್ ಕಸಿದುಕೊಂಡು ಯಾರನ್ನು ಕರೆಯುತ್ತೀರೋ ಕರೀರಿ ಎಂದು ಅವಾಜ್ ಹಾಕಿದ್ದಾರೆ. ಸ್ಥಳೀಯ ಮಸೀದಿಗಳ ಮೈಕ್ ಗಳಲ್ಲಿ, “ಇವರಿಗೆ ಯಾರು ಕೂಡ ಮಾಹಿತಿ, ಫೋನ್ ನಂಬರ್ ಕೂಡಬೇಡಿ” ಎಂದು ಅನೌನ್ಸ್ ಮಾಡಲಾಗಿದೆ.

ಇದನ್ನೂ ಓದಿ:  ಸುಂದರ ಯುವಕ ಏಲಿಯನ್ ಆಗಿ ಬದಲಾಗಿದ್ದು ಹೇಗೆ ಗೊತ್ತೇ? ವೈರಲ್ ವಿಡಿಯೋ ನೋಡಿ

ಮತಾಂಧ ಪುಂಡರ ಕೃತ್ಯದಿಂದ ಬೆದರಿರುವ ಆಶಾ ಕಾರ್ಯಕರ್ತೆ ಬಗ್ಗೆ ಆರೋಗ್ಯ ಅಧಿಕಾರಿಗಳ ಬಳಿ ಹೇಳಿದ್ರೆ ಅವರೂ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಬೇಸತ್ತಿರುವ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಕಣ್ಣೀರು ಹಾಕಿದ್ದಾರೆ.

Trending Short Videos

error: Content is protected !!