fbpx

Please assign a menu to the primary menu location under menu

ಲಾಕ್-ಡೌನ್ ಉಲ್ಲಂಘಿಸಿ ಹೊಸ ಕಾರಿನಲ್ಲಿ ಜಾಲಿರೈಡ್ ಹೊರಟ, ಪೋಲೀಸ್ರಿಂದ ತಪ್ಪಿಸ್ಕೊಂಡ್ರು ಜನರ ಕೈಗೆ ಸಿಕ್ಕಿ ಹಿಗ್ಗಾಮುಗ್ಗಾ ಒದೆತಿಂದ. ವೀಡಿಯೋ ನೋಡಿ

ಕೊರೋನಾ ವೈರಸ್ ಹರಡೋದನ್ನ ನಿಯಂತ್ರಿಸಲು ದೇಶಾವ್ಯಾಪ್ತಿ ಲಾಕ್-ಡೌನ್ ಮಾಡಲಾಗಿದ್ದರೆ, ಇಲ್ಲೊಬ್ಬ ತನ್ನ ಹೊಸ ಕಾರಿನಲ್ಲಿ ಜಾಲಿ ರೈಡ್ ಮಾಡಲು ಹೋಗಿ ಜನರಿಂದ ಹಿಗ್ಗಾಮುಗ್ಗಾ ಒದೆತಿಂದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಕಾಸರಗೋಡು ನಿವಾಸಿ ರಿಯಾಝ್ ಎಂಬಾತನೆ ಜಾಲಿ ರೈಡ್ ಮಾಡಲು ಹೋಗಿ ಒದೆತಿಂದ ಭೂಪ.

ಲಾಕ್-ಡೌನ್ ಆದೇಶ ಹೊರಡಿಸೋ ಮುನ್ನಾದಿನ ತಾನು ಬುಕ್ ಮಾಡಿದ್ದ ಹೊಸ ಮಾರುತಿ ಸ್ವಿಫ್ಟ್ ಕಾರು ರಿಯಾಜ್ ಕೈಸೇರಿದೆ. ಲಾಕ್-ಡೌನ್ ನಿಂದಾಗಿ ಹೊಸ ಕಾರು ಚಲಾಯಿಸಲು ಅವಕಾಶ ಸಿಗದಿರೋದರಿಂದ ಬೇಸತ್ತ ಈತ ಕೊನೆಗೂ ಆದೇಶ ಧಿಕ್ಕರಿಸಿ, ಆರೋಗ್ಯವನ್ನು ಲೆಕ್ಕಿಸದೆ ತನ್ನ ಹೊಸಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿದ್ದಾನೆ. ರಸ್ತೆಯಲ್ಲಿ ರಿಯಾಝ್ ಕಾರು ಬರೋದನ್ನ ಗಮನಿಸಿದ ಪೋಲೀಸರು ಗಾಡಿ ನಿಲ್ಲಿಸಲು ಸೂಚಿಸಿದರು ನಿಲ್ಲಿಸದ ಆರೋಪಿ ಕಾಸರಗೋಡಿನಿಂದ ಕಣ್ಣೂರು ಕಡೆ ಆಗಮಿಸಿದ್ದಾನೆ.

ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ಸುದ್ದಿ ಮಾದ್ಯಮಗಳು ಸುದ್ದಿ ಪ್ರಕಟಿಸಿದ್ದು, ಇದನ್ನು ಕಂಡ ಕಣ್ಣೂರು ನಿವಾಸಿಗಳು ಕೊರೋನಾ ಹೊತ್ತ ವ್ಯಕ್ತಿ ಕಣ್ಣೂರು ಪ್ರವೇಶಿಸಿದ್ದಾನೆ ಎಂದು ರೊಚ್ಚಿಗೆದ್ದು ರಿಯಾಜ್ ಕಾರಿಗಾಗಿ ಕಾದು ಕುಳಿತಿದ್ದಾರೆ. ರಿಯಾಜ್ ಕಾರು ಬರುತ್ತಿರೋದನ್ನು ಗಮನಿಸಿದ ನಿವಾಸಿಗಳು ಕಾರು ಅಡ್ಡ ಹಾಕಿದ್ದಾರೆ. ಆದರೆ ರಿಯಾಜ್ ಗಾಡಿ ನಿಲ್ಲಿಸದೆ ಹಿಂದಕ್ಕೆ ತಿರುಗಿಸಲು ಯತ್ನಿಸಿದ್ದಾನೆ. ಇದರಿಂದ ಇನ್ನಷ್ಟು ಆಕ್ರೋಷಕ್ಕೆ ಒಳಗಾದ ನಿವಾಸಿಗಳು ಕಲ್ಲನ್ನು ಎತ್ತಿ ರಿಯಾಜ್ ಕಾರಿಗೆ ಹಾಕಿದ್ದಾರೆ.

ನಂತರ ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೋಲೀಸರಿಗೆ ಒಪ್ಪಿಸಿದ್ದಾರೆ. ಆತನನ್ನು ವಶಕ್ಕೆ ಪಡೆದ ಪೋಲೀಸರು ರಿಯಾಝ್ ಮೇಲೆ ಅತೀ ವೇಗದ ಚಲಾವಣೆ, ಲಾಕ್‌ಡೌನ್ ಆದೇಶ ಉಲ್ಲಂಘನೆ, ಪೊಲೀಸರ ಸೂಚನೆ ಉಲ್ಲಂಘನೆ ಕೇಸ್ ದಾಖಲಿಸಿದ್ದಾರೆ.

error: Content is protected !!