fbpx

ಪಾಕಿಸ್ತಾನ ಕಷ್ಟದಲ್ಲಿದೆ ಸಹಾಯ ಮಾಡಿ ಎಂದು ಅಭಿಮಾನಿಗಳಲ್ಲಿ ಕೇಳೋಕೆ ಹೋಗಿ ಹಿಗ್ಗಾಮುಗ್ಗಾ ಜಾಡಿಸಿಕೊಂಡ ಯುವಿ, ಭಜ್ಜಿ. ವೀಡಿಯೋ ನೋಡಿ

ಕೊರೊನಾ ವೈರಸ್ ಭಾರತದಾದ್ಯಂತ ಕೋಲಾಹಲ ಎಬ್ಬಿಸಿದೆ. ಕೊರೋನಾ ಹೋರಾಟಕ್ಕೆ ದೇಣಿಗೆ ನೀಡಲು ಭಾರತ ಸರ್ಕಾರ ಕೇಳಿಕೊಂಡ ಬೆನ್ನಲ್ಲೇ ಅನೇಕ ಸಂಘಸಂಸ್ಥೆಗಳು, ಗಣ್ಯವ್ಯಕ್ತಿಗಳು, ಸೆಲೆಬ್ರಿಟಿಗಳು ಧನಸಹಾಯವನ್ನು ಮಾಡಿದ್ದಾರೆ. ಆದರೆ ಕೋಟಿ ಕೋಟಿ ಇದ್ದರೂ ಹಣ ಬಿಚ್ಚದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಇದೀಗ ಪಾಕಿಸ್ತಾನಕ್ಕೆ ಕೊರೋನಾ ಹೋರಾಟಕ್ಕೆ ಸಹಾಯ ಹಸ್ತ ಚಾಚುವಂತೆ ಭಾರತೀಯರಲ್ಲಿ ಕೇಳಿಕೊಂಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.


ಪಾಕಿಸ್ತಾನದಲ್ಲಿ ಮಾಜಿ ನಾಯಕ ಶಾಹೀದ್ ಶಾಫ್ರಿದಿ ನಡೆಸುವ ಸಹಾಯಾರ್ಥ ಸಂಸ್ಥೆಗೆ ಧನಸಹಾಯ ಮಾಡುವಂತೆ ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಹಾಗೂ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ಅಭಿಮಾನಿಗಳಲ್ಲಿ ಕರೆನೀಡಿದ್ದಾರೆ. ಇದು ಫ್ಯಾನ್ಸ್ ಗಳಲ್ಲಿ ಆಕ್ರೋಶ ಉಂಟುಮಾಡಿದ್ದು, ಇಬ್ಬರನ್ನೂ ಹಿಗ್ಗಾಮುಗ್ಗಾ ತರಟೆಗೆ ತೆಗೆದುಕೊಂಡಿದ್ದಾರೆ.

ಸದಾ ಗಡಿಯಾಚೆಗಿನ ಭಯೋತ್ಪಾದನೆಯ ಚಟುವಟಿಕೆಗಳಿಗೆ ಕುಮ್ಮುಕ್ಕು ನೀಡುತ್ತಿರುವ ಪಾಕಿಸ್ತಾನದ ಪರವಾಗಿ ಭಾರತೀಯ ಕ್ರಿಕೆಟಿಗರು ನೆರವು ಯಾಚಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಂದು ಕಾಶ್ಮೀರ ವಿರುದ್ಧ ಹೋರಾಟ ಸಾರಿದ್ದ ಆಫ್ರಿದಿಗೆ ಯುವಿ ಹಾಗೂ ಭಜ್ಜಿ ಬೆಂಬಲ ಸೂಚಿಸಿರುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

error: Content is protected !!