fbpx

Please assign a menu to the primary menu location under menu

90ರ ಹರೆಯದಲ್ಲಿಯೂ ಕೊರೋನ ವೈರಸ್ ವಿರುದ್ಧ ಹೋರಾಡಿ ಗುಣಮುಖರಾದ ಕೇರಳದ ವೃದ್ಧ ದಂಪತಿ, ಡಿಟೈಲ್ ಇಲ್ಲಿದೆ ನೋಡಿ

ಕೊರೋನಾ ವೈರಸ್ ಸೋಂಕಿತರು ಗುಣಮುಖರಾಗುವುದೇ ಕಷ್ಟ. ಅದರಲ್ಲೂ ಚಿಕ್ಕ ಮಕ್ಕಳು ಹಾಗೂ ವೃದ್ಧರಿಗೆ ಸೋಂಕು ಬಾಧಿಸಿದರೆ ನಂತರ ಅವರನ್ನು ಬದುಕಿಸುವ ಸಾಧ್ಯತೆ ಬಹಳ ಕಡಿಮೆ ಎಂಬ ಮಾತನ್ನು ಕೇರಳದ ವೃದ್ಧ ದಂಪತಿ ಸುಳ್ಳು ಮಾಡಿದ್ದಾರೆ.

93, 88ರ ಇಳಿ ವಯಸ್ಸಿನಲ್ಲಿಯೂ ಈ ವೃದ್ಧ ದಂಪತಿ ಹೋರಾಡಿ ಗೆದ್ದಿದ್ದಾರೆ. ಕೊರೋನಾ ವಿರುದ್ಧ ಹೋರಾಡುತ್ತಿರುವ ಅಷ್ಟೂ ರೋಗಿ ಗಳಿಗೆ ಮಾದರಿಯಾಗಿದ್ದಾರೆ. ಕೊರೋನಾ ಸೋಂಕಿತ ಕೇರಳದ 93 ವರ್ಷದ ವೃದ್ಧ ಹಾಗೂ ಅವರ ಪತ್ನಿ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ. ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಾಜ ಅವರು ತಿಳಿಸಿದ್ದಾರೆ. ಇಟಲಿಯಿಂದ ಹಿಂದಿರುಗಿದ್ದ ತಮ್ಮ ಮಗ ಹಾಗೂ ಮೊಮ್ಮಗನಿಂದಾಗಿ ಈ ವೃದ್ಧ ದಂಪತಿ ಸೋಂಕಿತರಾಗಿದ್ದರು. ಇದೀಗ ಇಡೀ ಕುಟುಂಬವೇ ಕೊರೋನಾ ಸೋಂಕಿನಿಂದ ಪಾರಾಗಿದೆ.

ಈ ಹಿರಿಯ ದಂಪತಿ ಅಕ್ಷರಶಃ ಸಾವಿನಿಂದ ಮರಳಿದ್ದಾರೆ ಎಂದು ಕೇರಳ ಆರೋಗ್ಯ ಸಚಿವಾಲಯ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇಬ್ಬರಿಗೂ ಸಕ್ಕರೆ ಕಾಯಿಲೆ, ಬಿಪಿ ಹಾಗೂ ಇತರ ವೃದ್ಧಾಪ್ಯದಲ್ಲಿ ಸಾಧಾರಣವಾಗಿ ಕಾಣಿಸಿಕೊಳ್ಳುವ ರೋಗಗಳು ಇತ್ತು ಎನ್ನಲಾಗಿದೆ.

93 ವರ್ಷದ ವೃದ್ಧನಿಗೆ ಕೆಮ್ಮು, ಎದೆ ನೋವು, ಯೂರಿನ್ ಇನ್‌ಫೆಕ್ಷನ್‌ನಂತಹ ಸಮಸ್ಯೆಯೂ ಇತ್ತು. ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಅವರ ಪತ್ನಿಗೂ ಯೂರಿನ್ ಇನ್‌ಫೆಕ್ಷನ್ ಆಗಿತ್ತು. ಗಂಭೀರ ಸ್ಥಿತಿಯಲ್ಲಿದ್ದರೂ ಇದೀಗ ಯಶಸ್ವಿಯಾಗಿ ಸೋಂಕಿನಿಂದ ಪಾರಾಗಿದ್ದಾರೆ. ವೃದ್ಧ ದಂಪತಿಯನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿತ್ತು.

ಇಬ್ಬರನ್ನೂ ವಿಐಪಿ ಐಸಿಯುನಲ್ಲಿ ಬೇರೆ ಬೇರೆ ಕೋಣೆಗಳಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದರಿಂದ ಇಬ್ಬರೂ ಒಬ್ಬರನ್ನೊಬ್ಬರು ನೋಡಲಾಗದೆ ಚಡಪಡಿಸುತ್ತಿದ್ದರು. ನಂತರದಲ್ಲಿ ಇಬ್ಬರನ್ನೂ ಒಂದೇ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಅವರಿಬ್ಬರೂ ಪರಸ್ಪರ ನೋಡುವಂತೆಯೇ ಇಬ್ಬರನ್ನೂ ಮಲಗಿಸಲಾಗಿತ್ತು.

error: Content is protected !!