fbpx

ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬುದ್ಧಿ ಹೇಳುತ್ತಿರುವ ನಾಯಿ, ವೀಡಿಯೋ ವೈರಲ್

ದೇಶದಲ್ಲಿ ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸಲು ಲಾಕ್ ಡೌನ್ ಹೇರಲಾಗಿದ್ದರೂ ಬಹುತೇಕ ಕಡೆಗಳಲ್ಲಿ ಜನರು ಇನ್ನೂ ಕ್ಯಾರೇ ಅನ್ನುತ್ತಿಲ್ಲ. ಮಾರುಕಟ್ಟೆ, ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಷ್ಟೇ ಬುದ್ಧಿ ಹೇಳಿದರೂ ಜನರಿಗೆ ಕೊರೋನ ವೈರಸ್ ನ ತೀವ್ರತೆ ಅರ್ಥವಾಗುತ್ತಿಲ್ಲ. ಬಹುತೇಕ ಅಂಗಡಿಗಳ ಮುಂದೆ ಜನರು ಗುಂಪಾಗಿ ನಿಲ್ಲುವುದನ್ನು ತಡೆಯಲು ವೃತ್ತಗಳನ್ನು ಹಾಕಿದ್ದರು ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ಆದರೆ ನಾಯಿಯೊಂದು ಅಂಗಡಿಯ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಲಾದ ವೃತ್ತದಲ್ಲಿ ನಿಂತಿರುವ ವೀಡಿಯೋ ವೈರಲ್ ಆಗಿದೆ. ಇದೀಗ ಲಾಕ್ ಡೌನ್ ಉಲ್ಲಂಘನೆ ಮಾಡುತ್ತಿರುವವರನ್ನು ಈ ನಾಯಿ ಜೊತೆ ಹೋಲಿಕೆ ಮಾಡಿ, ನಿಮಗಿಂತ ನಾಯಿಯೇ ಶ್ರೇಷ್ಟ್ರ ಎಂದು ಟ್ರೋಲ್ ಮಾಡುತ್ತಿದ್ದಾರೆ ನೆಟ್ಟಿಗರು. ಇಲ್ಲಿದೆ ನೋಡಿ ವೈರಲ್ ವೀಡಿಯೋ,


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

error: Content is protected !!