fbpx

Please assign a menu to the primary menu location under menu

ತನಗೆ ಕೊರೊನಾ ಸೋಂಕು ತಗುಲಿದೆ ಎಂದು ಪೊಲೀಸ್ ಠಾಣೆಗೆ ಆಗಮಿಸಿದ ಭೂಪ, ಮತ್ತೇನಾಯ್ತು ನೋಡಿ

ಬೆಂಗಳೂರಿನಲ್ಲಿ ವ್ಯಕ್ತಿಯೋರ್ವ ತನಗೆ ಕೊರೊನಾ ಸೋಂಕು ತಗುಲಿದೆ ಎಂದು ಹೇಳಿಕೊಂಡು ಪೊಲೀಸ್ ಠಾಣೆಯ ಮುಂದೆ ಕೂತು, ಸ್ಥಳದಲ್ಲಿದ್ದವರನ್ನೆಲ್ಲ ಹೈರಾಣಾಗಿಸಿದ ಘಟನೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ಬಳಿ ನಡೆದಿದೆ.

ಪೊಲೀಸ್ ಠಾಣೆಯ ಮುಂದೆ ಮಾಸ್ಕ್ ಧರಿಸಿ, ತನಗೆ ಕೊರೊನಾ ಸೋಂಕು ತಗುಲಿದೆ ಎಂದು ಹೇಳಿದ ವ್ಯಕ್ತಿ, ಕೈಯಲ್ಲಿ ಮೆಡಿಸಿನ್ ಸ್ಲಿಪ್ ಹಿಡಿದು ಕೂತಿದ್ದು, ಈತನನ್ನು ಕಂಡ ಪೊಲೀಸರು, ಸ್ಥಳೀಯರು ಕಕ್ಕಾಬಿಕ್ಕಿಯಾಗಿ ಮಾರುದೂರ ಓಡಿದ್ದಾರೆ.ಸುಮಾರು ಎರಡು ಗಂಟೆಗಳ ಕಾಲ ವ್ಯಕ್ತಿ ಈ ರೀತಿ ವರ್ತಿಸಿದ್ದು, ಸ್ಥಳಕ್ಕೆ ಆಗಮಿಸಿದ ಆರೋಗ್ಯಾಧಿಕಾರಿಗಳು ಪರಿಶೀಲನೆ ಮಾಡಿದಾಗ ಈತನ ನಾಟಕ ಬಯಲಾಗಿದೆ.ನಾಟಕವಾಡಿ ತಗಲಾಕ್ಕೊಂಡವನನ್ನ ಇನ್ನಷ್ಟು ವೈದ್ಯಕೀಯ ಪರಿಶೀಲನೆ ನಡೆಸೋಕ್ಕೆ ಆರೋಗ್ಯಾಧಿಕಾರಿಗಳು ಮುಂದಾಗಿದ್ದಾರೆ.

error: Content is protected !!