ಧರ್ಮಸ್ಥಳ ಕ್ಷೇತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ್ದ ಅರ್ಚಕ ಪತ್ತೆಯಾಗಿದ್ದು , ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿದ್ದಾನೆ.
ಸುಳ್ಳು ಸುದ್ದಿ ಹರಡಿದ್ದ ವ್ಯಕ್ತಿ ದಾವಣಗೆರೆಯ ಹೊನ್ನಳ್ಳಿ ತಾಲೂಕಿನ ಮಂದಿರವೊಂದರ ಅರ್ಚಕ ಮಧು ಎಂದು ಗುರುತಿಸಲಾಗಿದೆ. ಈತ ಮಂಜುನಾಥನ ಸನ್ನಿಧಿ ಧರ್ಮಸ್ಥಳದಲ್ಲಿ ದೀಪ ಆರಿದೆ. ಇದರಿಂದ ನಾಡಿಗೆ ಕಂಟಕ ಕಾದಿದ್ದು, ಮುಂಬರುವ ಕಂಟಕವನ್ನು ತಪ್ಪಿಸಲು ಮನೆ ಬಾಗಿಲಿಗೆ ದೀಪ ಹಚ್ಚಬೇಕೆಂಬ ವಾಟ್ಸಾಪ್ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ.
ಇದಕ್ಕೆ ಸ್ಪಷ್ಟನೆ ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ ಮಂಜುನಾಥ ದೇವಳದಲ್ಲಿ ದೇವರ ನಂದಾದೀಪ ನಂದಿದೆ ಎಂಬ ಅಪಪ್ರಚಾರ ಮಾತುಗಳು ಹರಡುತ್ತಿವೆ. ಇಂತಹ ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಿನಂತಿ ಮಾಡಿದ್ದಾರೆ.