fbpx

Please assign a menu to the primary menu location under menu

ಹೊರಗೆ ಹೋಗಿ ಸೀನಿ, ಎಲ್ಲರಿಗೂ ವೈರಸ್ ಹರಡಿ, ಎಲ್ಲರನ್ನೂ ನಾಶಮಾಡಿ ಎಂದ ಭೂಪ

ಜನರೆಲ್ಲರೂ ಹೊರಗೆ ಹೋಗಿ ಸೀನಿ. ಎಲ್ಲರಿಗೂ ವೈರಸ್ ಹರಡಿ ಎಂದು ಪೋಸ್ಟ್‌ ಮಾಡಿದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಜೀಬ್ ಎಂಬಾತ ನಗರದ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು 25 ವರ್ಷದಿಂದ ಬೆಂಗಳೂರಿನಲ್ಲಿ ಇದ್ದಾನೆ. ಈತ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಎಲ್ಲರಿಗೂ ವೈರಸ್ ಹರಡಿ ಎಂದು ಹೇಳಿ ಬರೆದುಕೊಂಡಿದ್ದಾನೆ.

ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಆರೋಪಿಯು ತನ್ನ ಫೋಟೊ ಹಾಕಿದ್ದು ಅದರೊಂದಿಗೆ ಜಗತ್ತಿನಾದ್ಯಂತ ವೈರಸ್ ಹರಡಿ, ಜಗತ್ತನ್ನೇ ಮುಗಿಸಿ ಎಂದು ಬರೆದಿದ್ದಾನೆ.

error: Content is protected !!