ಭಾರತ ಸರ್ಕಾರ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ದೇಶದಾದ್ಯಂತ 21ದಿನಗಳ ಲಾಕ್ ಡೌನ್ ಜಾರೊಗೊಳಿಸಿದೆ. ಈಗಾಗಲೇ ಈ ಮಹಾಮಾರಿಗೆ ಪ್ರಪಂಚದಾದ್ಯಂತ 21ಸಾವಿರಕ್ಕೂ ಹೆಚ್ಚು ಜನ ಪ್ರಾಣ ತೆತ್ತಿದ್ದಾರೆ. ಭಾರತದಲ್ಲಿಯೇ 15ಜನ ಸಾವಿಗೀಡಾಗಿದ್ದು, 650ಕ್ಕೂ ಹೆಚ್ಚು ಜನರಿಗೆ ವೈರಸ್ ತಗುಲಿದೆ.
ಭಾರತದಲ್ಲಿ ಕೊರೋನ ವೈರಸ್ ಹರಡುವುದನ್ನು ತಡೆಯಲು ದೇಶದಾದ್ಯಂತ ಬಂದ್ ಆಚರಿಸಲಾಗುತ್ತಿದ್ದರೂ ಬೆಂಗಳೂರಿನ ಜನರಿಗೆ ಇನ್ನೂ ಬುದ್ದಿ ಬಂದಿಲ್ಲ. ಲಾಕ್ ಡೌನ್ ಮಧ್ಯೆಯೇ ಬೆಂಗಳೂರಿನ ಅನೇಕ ಕಡೆಗಳಲ್ಲಿ ಜನರು ಗುಂಪುಗುಂಪಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಸ್ಲಿಂ ಸಮುದಾಯ ಹೆಚ್ಚಿರುವ ಶಿವಾಜಿನಗರ, ಕೆಆರ್ ಮಾರ್ಕೆಟ್ ಪ್ರದೇಶಗಳಲ್ಲಿ ಜನಜಾತ್ರೆಯೆ ಸೇರುತ್ತಿರೋದು ಕಂಡುಬರುತ್ತಿದೆ. ಬೆಂಗಳೂರಿಗರಿಗೆ ಇನ್ನೂ ಕೊರೋನಾ ವೈರಸ್ ತೀವ್ರತೆ ಅರ್ಥವಾಗದಿರೋದು ದುರಾದೃಷ್ಟ. ರಾಜ್ಯ ಸರ್ಕಾರ ಹಾಗೂ ಪೋಲೀಸರು ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.
ನಿನ್ನೆ ರಾತ್ರಿ ಶಿವಾಜಿನಗರ, ರಸೆಲ್ ಮಾರ್ಕೆಟ್ ಪ್ರದೇಶಗಳಲ್ಲಿ ಜನಜಂಗುಳಿ ಹೇಗಿತ್ತು ನೋಡಿ,