ರಸ್ತೆಯಲ್ಲಿ ವಾಹನ ಸವಾರರ ಮಧ್ಯೆ ಜಗಳ, ಹೊಡೆದಾಟಗಳು ಆವಾಗಾವಾಗ ನಡೆಯುತ್ತಿರುತ್ತೆ. ಸೈಡ್ ಕೊಡಲಿಲ್ಲ ಅಂತನೋ ಅಥವಾ ಗಾಡಿ ತಾಗಿಸಿದ ಅಂತನೋ ಜಗಳವಾಡುವುದನ್ನು ನಾವು ನೋಡುತ್ತಿರುತ್ತೇವೆ. ಇಂತಹ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ.
ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಕಾರು ಚಾಲಕನೊಬ್ಬ ಬೈಕ್ ಸವಾರನ ಮೇಲೆಯೇ ಕಾರು ಹತ್ತಿಸಿಕೊಂಡು ಹೋಗಿರುವ ವಿಡಿಯೋ ಇದಾಗಿದೆ.
ಸೈಡ್ ಕೊಡುವ ವಿಷಯಕ್ಕೆ ಬೈಕ್ ಸವಾರ ಹಾಗೂ ಕಾರು ಚಾಲಕನ ಮಧ್ಯೆ ಜಗಳ ಉಂಟಾಗಿದ್ದು, ರೊಚ್ಚಿಗೆದ್ದ ಕಾರು ಚಾಲಕ ತನ್ನ ವಾಹನವನ್ನು ಏಕಾಏಕಿ ಬೈಕ್ ಸವಾರನ ಮೇಲೆ ಹತ್ತಿಸಿದ್ದಾನೆ. ಕಾರು ಚಾಲಕನ ಆರ್ಭಟಕ್ಕೆ ಬೈಕ್ ನೆಲಕ್ಕೆ ಉರುಳಿದ್ದು, ಬೈಕ್ ಸವಾರ ಕೂಡ ನೆಲಕ್ಕೆ ಬಿದ್ದಿದ್ದಾನೆ. ಆದರೂ ಕಾರು ಚಾಲಕ ವಾಹನ ನಿಲ್ಲಿಸದೆ ಬೈಕ್‌ನ ಮೇಲೆ ತನ್ನ ವಾಹನ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.
ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಬೆಚ್ಚಿ ಬೀಳಿಸುವಂತಿದೆ. ದೇವರ ದಯೆಯಿಂದ ಬೈಕ್ ಸವಾರನಿಗೆ ಯಾವುದೇ ರೀತಿಯಲ್ಲಿ ಗಂಭೀರ ಗಾಯಗಳು ಉಂಟಾಗಿಲ್ಲ. ವೈರಲ್ ವಿಡಿಯೋ ನೋಡಿ,
