ಈ ವರ್ಷ ಹಿಂದೂಸ್ತಾನದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಬ್ರಿಟಿಷ್ ದಾಸ್ಯದಿಂದ ನಮ್ಮ ದೇಶ ಬಿಡುಗಡೆ ಹೊಂದಿ 75ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ.
ಇದರ ಪ್ರಯುಕ್ತ ಈ ಬಾರಿ ಪ್ರಧಾನಿ ಮೋದಿಯವರು ಹರ್ ಘರ್ ತಿರಂಗಾ ಎಂಬ ಅಭಿಯಾನವನ್ನು ಶುರು ಮಾಡಿದ್ದರು. ಪ್ರತಿ ಮನೆಯಲ್ಲೂ ತಿರಂಗ ಹಾರಿಸುವ ಮೂಲಕ ದೇಶದ ಉದ್ದಗಲಕ್ಕೂ ಸ್ವಾತಂತ್ರ್ಯದ ಹಬ್ಬ ಆಚರಿಸುವಂತೆ ಕರೆನೀಡಿದ್ದರು. ಇದಕ್ಕೆ ದೇಶಪ್ರೇಮಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಆದರೆ ಕೆಲವು ಮೋದಿ ವಿರೋಧಿ ಪಕ್ಷಗಳು ಹಾಗೂ ದೇಶ ವಿರೋಧಿಗಳು ಮೋದಿಯವರ ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಕೊಂಕು ಮಾತಾಡೋದರ ಜೊತೆಗೆ ವಿರೋಧವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿ ಜನರನ್ನು ಮರಳು ಮಾಡುವ ಕೆಲಸ ಭಾರೀ ಜೋರಾಗಿ ನಡೆಯುತ್ತಿದೆ. ಇದೀಗ ರಿಕ್ಷಾ ಚಾಲಕರೊಬ್ಬರು ಇಂತಹಾ ವಿರೋಧಿಗಳಿಗೆ ಖಡಕ್ ಆಗಿ ತಿರುಗೇಟು ನೀಡಿರುವ ವಿಡಿಯೋವೊಂದು ವೈರಲ್ ಆಗಿದೆ.
