ರೈಲ್ವೇ ಅಪಘಾತದಿಂದ ಪ್ರತಿವರ್ಷ ನೂರಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಅಪಘಾತಗಳಲ್ಲಿ ಬಹುತೇಕ ಘಟನೆಗಳು ಜನರ ನಿರ್ಲಕ್ಷ್ಯದಿಂದ ಸಂಭವಿಸುತ್ತದೆ.
ರೈಲಿನ ಬಾಗಿಲುಗಳಲ್ಲಿ ಸ್ಟಂಟ್ ಮಾಡೋದು, ಅಪಾಯಕಾರಿ ಸ್ಥಳಗಳಲ್ಲಿ ರೈಲು ಹಳಿ ಕ್ರಾಸಿಂಗ್ ಮಾಡೋದು, ಇಯರ್ ಫೋನ್ ಧರಿಸಿ ಹಳಿಯಲ್ಲಿ ನಡಿಯೋದು, ರೈಲ್ವೇ ಹಳಿ ಮೇಲೆ ನಿಂತು ವಿಡಿಯೋಗಳನ್ನು ಮಾಡೋದು ಹೀಗೆ ಹಲವು ರೀತಿಯಲ್ಲಿ ಜನರ ನಿರ್ಲಕ್ಷ್ಯಕ್ಕೆ ಪ್ರಾಣ ತೆರುತ್ತಾರೆ.
ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಎಫ್‌ಎಸ್ ಅಧಿಕಾರಿ ಸುಸಾಂತ್ ನಂದ ಅವರು ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.
ರೈಲ್ವೇ ಸ್ಟೇಷನ್ ಬರುವ ಮೊದಲೇ ರೈಲ್ವೆ ಕ್ರಾಸಿಂಗ್ ಬಳಿ ಜನರು ರೈಲಿನಿಂದ ಇಳಿದು ಹಳಿ ದಾಟೋದನ್ನ ವಿಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ಅದೇ ಹೊತ್ತಿಗೆ ಎದರುಗಡೆಯೊಂದು ಇನ್ನೊಂದು ರೈಲು ವೇಗವಾಗಿ ಬಂದಿದ್ದು, ಹಳಿ ದಾಟುತ್ತಿದ್ದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ.
ಆದರೆ ಮಹಿಳೆಯೊಬ್ಬರು ಓಡುವಾಗ ತಮ್ಮ ಬ್ಯಾಗ್ ರೈಲು ಹಳಿಯ ಪಕ್ಕದಲ್ಲಿ ಬಿದ್ದಿದ್ದು, ಅದನ್ನು ಹೆಕ್ಕಲು ಮಹಿಳೆ ತನ್ನ ಪ್ರಾಣ ಪಣಕ್ಕಿಟ್ಟು ಓಡಿ ಹಿಂದಕ್ಕೆ ಬಂದಿದ್ದಾಳೆ. ತನ್ನ ಬ್ಯಾಗ್ ಎತ್ತಿ ಎರಡು ಹೆಜ್ಜೆ ಇಡುತ್ತಿದ್ದಂತೆ ರೈಲು ವೇಗವಾಗಿ ಮಹಿಳೆಯ ಪಕ್ಕದಲ್ಲಿಯೇ ಹಾದುಹೋಗಿದೆ.
ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಮಹಿಳೆ ಸ್ವಲ್ಪ ತಡಮಾಡಿದ್ದರೂ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಳೋ ಏನೋ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಬೆಚ್ಚಿಬೀಳಿಸುವಂತಿದೆ.
