ವಯಸ್ಸಾದ ಮುದುಕನ ಜೊತೆ ಯುವತಿಯೊಬ್ಬಳು ಮದುವೆಯಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಯಸ್ಸಾದ ವ್ಯಕ್ತಿ ಚಿಕ್ಕ ವಯಸ್ಸಿನ ಯುವತಿಯನ್ನು ಮದುವೆಯಾಗುತ್ತಿರೋದು ಈ ವಿಡಿಯೋದಲ್ಲಿದೆ.
ಮದುಮಗ ಮುದುಕನ ಮೊಗದಲ್ಲಿ ಮದುವೆಯ ಮಂದಹಾಸ ಕಾಣುತ್ತಿದ್ದರೆ, ಮದುಮಗಳು ಮಾತ್ರ ಮುಖ ಸಪ್ಪೆ ಮಾಡಿಕೊಂಡು ಕುಳಿತುಕೊಂಡಿದ್ದಾಳೆ. ಸಣ್ಣ ವಯಸ್ಸಿನ ಯುವತಿಯನ್ನು ಮದುವೆಯಾಗುತ್ತಿರುವ ಮುದುಕನ ಸಂತೋಷಕ್ಕೆ ಮಾತ್ರ ಪಾರವೇ ಇಲ್ಲ.
ಈ ವಿಡಿಯೋವನ್ನು ‘ಸೈಕೋ ಬಿಹಾರಿ’ ಎಂಬ ಇನ್ಸ್ಟಾಗ್ರಾಮ್ ಚಾನಲ್‌ನಲ್ಲಿ ಶೇರ್ ಮಾಡಲಾಗಿದ್ದು, ಸಖತ್ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅನೇಕರು ಇದು ಸ್ಕ್ರಿಪ್ಟ್ ಮಾಡಿರುವ ವಿಡಿಯೋ ಎಂದು ಕಮೆಂಟ್ ಮಾಡಿದ್ದಾರೆ. ವಿಡಿಯೋದ ಅಸಲಿಯತ್ತು ಇನ್ನಷ್ಟೇ ತಿಳಿದುಬರಬೇಕಿದೆ.
