ಇಡೀ ಹಿಂದೂಸ್ತಾನದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಮನೆಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ವೀರರಿಗೆ ಅಭಿಮಾನ ಸೂಚಿಸಲು ಸಮಸ್ತ ಭಾರತೀಯರು ಸಿದ್ಧರಾಗಿದ್ದಾರೆ.
ಆದರೆ ಇಂತಹ ಸಂಭ್ರಮದ ಸಂದರ್ಭದಲ್ಲಿಯೂ ದೇಶದ್ರೋಹಿಗಳು ತಮ್ಮ ದೇಶವಿರೋಧಿ ಚಟುವಟಿಕೆ ನಡೆಸುವುದನ್ನು ನಿಲ್ಲಿಸಿಲ್ಲ. ಎಲ್ಲಾ ದೇಶಪ್ರೇಮಿಗಳ ಮನೆ ಮನಗಳಲ್ಲಿ ತ್ರಿವರ್ಣಧ್ವಜ ಹಾರಾಡುತ್ತಿದ್ದರೆ, ಅಲ್ಲೊಂದು ಪಾಕಿಸ್ತಾನಿ ಪ್ರೇಮಿಯ ಮನೆಯಲ್ಲಿ ಪಾಪಿ ಪಾಕಿಸ್ತಾನದ ಧ್ವಜ ಪ್ರತ್ಯಕ್ಷವಾಗಿದೆ.
ಘಟನೆ ನಡೆದಿರೋದು ಉತ್ತರ ಪ್ರದೇಶದ ಖುಷಿನಗರದಲ್ಲಿ. ದೇಶದ್ರೋಹಿ ಮುಸ್ಲಿಂ ಯುವಕನೊಬ್ಬ ತನ್ನ ಮನೆಯ ಮೇಲೆ ಪಾಕಿಸ್ತಾನದ ಭಾವುಟ ಹಾರಿಸುವ ಮೂಲಕ ತನ್ನ ಮತಾಂಧತೆ ಪ್ರದರ್ಶಿಸಿದ್ದಾನೆ.
ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಯುಪಿ ಪೊಲೀಸರು ಸ್ಥಳಕ್ಕೆ ತೆರಳಿ ಶತ್ರು ರಾಷ್ಟ್ರದ ಭಾವುಟ ಕೆಳಗಿಸಿದ್ದಲ್ಲದೆ, ಮತಾಂಧ ದೇಶದ್ರೋಹಿ ಯುವಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಬಂಧಿತ ಆರೋಪಿಯನ್ನು ಸಲ್ಮಾನ್(21) ಎಂದು ಗುರುತಿಸಲಾಗಿದ್ದು, ಧ್ವಜ ತಯಾರು ಮಾಡಿ ಕೊಟ್ಟ ಆತನ ಚಿಕ್ಕಮ್ಮ ಶಹನಾಜ್(22) ಎಂಬಾಕೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಅಲ್ಲದೆ ಧ್ವಜ ಹಾರಿಸಲು ಸಹಕಾರ ನೀಡಿದ ಕಾರಣಕ್ಕೆ ಸಲ್ಮಾನ್ ಸೋದರ ಇಮ್ರಾನ್ ಎಂಬಾತನ ವಿರುದ್ಧವೂ ಬಾಲಾಪರಾಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
