ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ಈಗಿನ ಯುವಪೀಳಿಗೆ ಏನೇನೋ ಕಸರತ್ತುಗಳನ್ನು ನಡೆಸುತ್ತಾರೆ. ಕೆಲವೊಮ್ಮೆ ಇಂತಹ ಕಸರತ್ತುಗಳು ಜೀವಕ್ಕೆ ಕುತ್ತು ತರೋದು ಇದೆ.
ಟಿಕ್‌ಟಾಕ್ ಬಂದ ನಂತರವಂತೂ ವೈರಲ್ ವಿಡಿಯೋಗಳ ಹಾವಳಿ ಬಹಳ ಜೋರಾಗಿದೆ. ಇಲ್ಲೊಬ್ಬಳು ಯುವತಿ ಟಿಕ್‌ಟಾಕ್ ರೀಲ್ಸ್ ಮಾಡಲು ಹೋಗಿ ಪೇಚಿಗೆ ಸಿಲುಕಿದ್ದಾಳೆ.
ಎಮ್ಮೆಗಳಿಗೆ ಆಹಾರ ತಿನ್ನಿಸಲು ಹೋಗಿದ್ದ ಯುವತಿ, ಅವುಗಳ ಮುಂದೆಯೇ ತನ್ನ ಟಿಕ್‌ಟಾಕ್ ಕಲೆಯನ್ನು ಪ್ರದರ್ಶನ ಮಾಡಲು ಹೋಗಿದ್ದಾಳೆ. ಎಮ್ಮೆಗಳ ಮುಂದೆ ನಿಂತು ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಲು ಹೋಗಿದ್ದಾಳೆ.
ಸ್ವಲ್ಪ ಹೊತ್ತು ಎಲ್ಲವನ್ನು ಸಹಿಸಿಕೊಂಡ ಎಮ್ಮೆ ಕೊನೆಗೆ ಈಕೆಯ ಕಾಟ ತಡೆಯಲಾಗದೆ ತನ್ನ ಕೊಂಬಿನಿಂದ ಗುದ್ದಿ ಆಕೆಯನ್ನು ದೂಡಿ ಹಾಕಿದೆ. ಎಮ್ಮೆ ಗುದ್ದಿದ ರಭಸಕ್ಕೆ ಯುವತಿ ಪಕ್ಕದಲ್ಲಿದ್ದ ನೀರಿನ ಪಾತ್ರೆಯೊಳಗೆ ಹೋಗಿ ಬಿದ್ದಿದ್ದಾಳೆ.
ಯುವತಿಯ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಲಾಗಿದ್ದು, ಸಖತ್ ವೈರಲ್ ಆಗಿದೆ.
