ಸೋಶಿಯಲ್ ಮಿಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಆನಂದ್ ಮಹಿಂದ್ರ ಅವರು ಸದಾ ಒಂದಿಲ್ಲೊಂದು ವಿಶೇಷವಾದ ವಿಡಿಯೋ ಅಥವಾ ಪೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಆನಂದ್ ಮಹೀಂದ್ರ ಅವರ ಟ್ವಿಟರ್ ಖಾತೆಯಿಂದ ಶೇರ್ ಆಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಕಾಮನ್‌ವೆಲ್ತ್ ಕ್ರೀಡಾ ಕೂಟ ಅದ್ದೂರಿಯಾಗಿ ಕೊನೆಗೊಂಡಿತು. ಈ ಕ್ರೀಡಾಕೂಟದಲ್ಲಿ ಎಂದಿನಂತೆ ಭಾರತದ ಕ್ರೀಡಾಪಟುಗಳು ಈ ಬಾರಿಯೂ ಭರ್ಜರಿ ಪದಕ ಭೇಟೆ ಮಾಡಿದ್ದು, ಕ್ರೀಡಾಭಿಮಾನಿಗಳು ಕ್ರಿಕೆಟ್ ಜಗತ್ತಿನಿಂದ ಹೊರಬಂದು ಇತರ ಕ್ರೀಡೆಗಳ ಮೇಲೆಯೂ ಕಣ್ಣಾಡಿಸುವಂತೆ ಮಾಡಿದ್ದರು.
ಇದು ಯುವ ಜನಾಂಗದಲ್ಲಿ ಇತರ ಕ್ರೀಡೆಗಳ ಮೇಲೂ ಆಸಕ್ತಿ ಹುಟ್ಟುಹಾಕುವಂತೆ ಮಾಡಿದೆ. ಆನಂದ್ ಮಹೀಂದ್ರಾ ಅವರು ಶೇರ್ ಮಾಡಿರುವ ವಿಡಿಯೋ ಕೂಡ ಇದಕ್ಕೆ ಸಂಬಂಧಪಟ್ಟಿದ್ದೆ. ವೈರಲ್ ವಿಡಿಯೋದಲ್ಲಿ ಪುಟ್ಟ ಬಾಲಕನೋರ್ವ ಯಾವುದೇ ಸ್ಪೋರ್ಟ್ಸ್ ಪರಿಕರಗಳು ಇಲ್ಲದೆ ಕಾಲಿ ಕಾಲಿನಲ್ಲಿ ರಸ್ತೆ ಮಧ್ಯಭಾಗದಲ್ಲಿ ಸ್ಟಂಟ್ ಮಾಡುತ್ತಿರೋದನ್ನ ನೀವು ಕಾಣಬಹುದಾಗಿದೆ.
ಈ ಬಾಲಕನಿಗೆ ಇನ್ನಷ್ಟು ತರಬೇತಿ ಸಿಕ್ಕರೆ ಮುಂದೆ ಬರುವ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತಕ್ಕೆ ಜಿಮ್ನಾಸ್ಟಿಕ್‌ನಲ್ಲೂ ಪದಕಗಳನ್ನು ತಂದುಕೊಡಬಲ್ಲ ಸಾಮರ್ಥ್ಯ ಈ ಬಾಲಕನಲ್ಲಿದೆ. ವಿಡಿಯೋದಲ್ಲಿರುವ ಹುಡುಗ ತಮಿಳುನಾಡಿನ ತಿರುನೆಲ್ವೆಲಿಯವನಾಗಿದ್ದಾನೆ ಎಂದು ತಿಳಿದುಬಂದಿದೆ. ಈ ವಿಡಿಯೋ ಅದಾಗಲೇ ಮಿಲಿಯನ್‌ಗಟ್ಟಲೆ ವೀವ್ಸ್ ಪಡೆದುಕೊಂಡಿದೆ.
