ವಾಹನ ಚಾಲಕರ ಸಾಕಷ್ಟು ಸ್ಟಂಟ್‌ಗಳ ವಿಡಿಯೋವನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೇವೆ. ಬೈಕ್‌ಗಳಲ್ಲಿ ವ್ಹೀಲಿಂಗ್ ಮಾಡೋದು, ಕಾರುಗಳಲ್ಲಿ ಸಾಹಸ ಪ್ರದರ್ಶೋದು ಹೀಗೆ ಆನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಾ ಇರುತ್ತವೆ.
ಕೆಲ ಸಮಯಗಳ ಹಿಂದೆ ಕೇರಳದ ಚಾಲಕನೊಬ್ಬ ತನ್ನ ಕಾರನ್ನು ಕಡಿದಾದ ಪ್ರದೇಶದಲ್ಲಿ ಪಾರ್ಕಿಂಗ್ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಆ ವಿಡಿಯೋವನ್ನು ನೋಡಿದವರು ಆ ಚಾಲಕನ ಸಾಹಸವನ್ನು ಕೊಂಡಾಡಿದ್ದರು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ‘ಡ್ರೈವಿಂಗ್ ಸ್ಕಿಲ್’ ಎನ್ನುವ ಯೂಟ್ಯೂಬ್ ಚಾನಲ್‌ನಲ್ಲಿ ಶೇರ್ ಮಾಡಲಾಗಿರುವ ಈ ವಿಡಿಯೋದಲ್ಲಿ, ಚಾಲಕನೊಬ್ಬ ತನ್ನ ಕಾರನ್ನು ಕಡಿದಾದ ಪ್ರದೇಶದಲ್ಲಿ ಯೂಟರ್ನ್ ತೆಗೆದುಕೊಳ್ಳೋದನ್ನು ಕಾಣಬಹುದಾಗಿದೆ.
ಚಾಲಕ ಚಾಣಾಕ್ಷತನದಿಂದ ಕಡಿದಾದ ಪ್ರದೇಶದಲ್ಲಿ ಸಾವಿಗೂ ಅಂಜದೇ ತನ್ನ ಕಾರನ್ನು ಯೂ ಟರ್ನ್ ಮಾಡಿದ್ದಾನೆ. ಸ್ವಲ್ಪ ಆಯತಪ್ಪಿದರು ಕಾರು ಪ್ರಪಾತಕ್ಕೆ ಬೀಳುವ ಸಾಧ್ಯತೆ ಇದ್ದರು ಚಾಲಕ ಇಂತಹ ಸಾಹಸಕ್ಕೆ ಇಳಿದಿದ್ದಾನೆ. ಈ ವಿಡಿಯೋ ಯೂಟ್ಯೂಬ್‌ನಲ್ಲಿ ಮಿಲಿಯನ್‌ಗಟ್ಟಲೆ ವೀವ್ಸ್ ಪಡೆದುಕೊಂಡಿದೆ.
ಕಾರು ಚಾಲಕನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೈ ಜುಮ್ಮೆನಿಸುವಂತಿದೆ. ಆದರೆ ಹೀಗೆ ಸಾಹಸ ಮಾಡಿದ ಸಾಹಸಿ ಕಾರು ಚಾಲಕ ಯಾರು ಎಂಬ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ. ವೈರಲ್ ವಿಡಿಯೋ ಇಲ್ಲಿದೆ ನೋಡಿ,
