ಚಾಮರಾಜಪೇಟೆಯ ಮೈದಾನದ ವಿವಾದದ ಕಿಚ್ಚು ತೀವ್ರ ಸ್ವರೂಪ ಪಡೆಯುತ್ತಿದೆ. ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವುದಿಲ್ಲ ಎಂದಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಈದ್ಗಾ ಮೈದಾನ ಎಂದು ಕರೆಯಲ್ಪಡುತ್ತಿದ್ದ ಈ ಜಾಗ ಇದೀಗ ದಾಖಲೆ ಪರಿಶೀಲಿಸಿದಾಗ ಸಾರ್ವಜನಿಕ ಮೈದಾನ ಅಲ್ಲದೆ ಸರ್ಕಾರದ ಸ್ವತ್ತು ಎಂಬುದು ಬಯಲಾಗಿದೆ. ಈ ಮೈದಾನದ ಮೇಲೆ ವಕ್ಫ್ ಬೋರ್ಡ್‌ಗೆ ಯಾವುದೇ ಹಕ್ಕು ಇಲ್ಲ ಎಂಬುದು ಬಯಲಾಗುತ್ತಿದ್ದಂತೆ ಹಿಂದೂ ಸಂಘಟನೆಗಳು ಮೈದಾನದಲ್ಲಿ ಗಣೇಶೋತ್ಸವ ಆಚರಿಸಿಯೇ ತೀರುತ್ತೇವೆ ಎಂದು ಹಠಕ್ಕೆ ಬಿದ್ದಿದೆ.
ಇದೀಗ ಬಿಜೆಪಿ ನಾಯಕ ರೇಣುಕಾಚಾರ್ಯ ಅವರು ಒಂದು ಹೆಜ್ಜೆ ಮುಂದು ಹೋಗಿ ಜಮೀರ್ ಅಹ್ಮದ್ ಖಾನ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ‘ಏಯ್ ಗುಜರಿ ಜಮೀರ್’ ಎನ್ನುವ ಮೂಲಕ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೃಪೆ – Public Tv