ಮೊದಲೇ ದಕ್ಷಿಣ ಭಾರತ ಸಿನಿಮಾಗಳ ಅಬ್ಬರಕ್ಕೆ ಕಂಗೆಟ್ಟು ಹೋಗಿರುವ ಬಾಲಿವುಡ್‌ಗೆ ಇದೀಗ ಬಹಿಷ್ಕಾರದ ಬಿಸಿಯೂ ಬಹಳ ದೊಡ್ಡ ಆಘಾತವನ್ನೇ ನೀಡಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಳಿಕ ಬಾಲಿವುಡ್‌ಗೆ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟು ಹೋಗುವಂತೆ ಕಾಣುತ್ತಿಲ್ಲ.
ಸಾಲುಸಾಲು ಪ್ಲಾಫ್ ಸಿನಿಮಾಗಳು, ದೊಡ್ಡ ದೊಡ್ಡ ದಿಗ್ಗಜರನ್ನು ಹಾಕಿದ್ರೂ ಸಿನಿಮಾಗಳು ನೆಲ ಕಚ್ಚಿ ಹೋಗುತ್ತಿದೆ. ಕಳೆದ ಒಂದೆರಡು ವರ್ಷಗಳಲ್ಲಿ ಬೆರಳೆಣಿಕೆಯಷ್ಟು ಸಿನಿಮಾ ಹೊರತುಪಡಿಸಿ ಉಳಿದ ಎಲ್ಲಾ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವಲ್ಲಿ ಸೋತಿದೆ.
ಆದರೆ ಇನ್ನೊಂದು ಕಡೆ ದಕ್ಷಿಣ ಭಾರತದ ಸಿನಿಮಾಗಳು ಉತ್ತರದಲ್ಲಿ ಭರ್ಜರಿಯಾಗಿ ಓಡುತ್ತಿವೆ. ಆರ್.ಆರ್.ಆರ್, ಕೆಜಿಎಫ್, ಪುಷ್ಪಾ, ವಿಕ್ರಾಂತ್ ರೋಣಾ ಹೀಗೆ ಹಲವು ಸಿನಿಮಾಗಳು ಉತ್ತರದ ಪ್ರೇಕ್ಷಕರನ್ನು ರಂಜಿಸಿದ್ದಷ್ಟೇ ಅಲ್ಲದೆ, ಕೋಟಿ ಕೋಟಿ ಹಣವನ್ನೂ ಬಾಚಿಕೊಂಡಿದೆ.
Aamir Khan’s film #LaalSinghChaddha has net collection of 11.50 Crores (in India) on the 1st day.
NCR & East Punjab have the highest contribution in this.
5 Holidays are near. Boycott call should not be weak💪#BoycottLalSinghChaddha 🔥
— The Analyzer (@Indian_Analyzer) August 12, 2022
ಇದೀಗ ಭಾರೀ ನಿರೀಕ್ಷೆ ಉಂಟುಮಾಡಿದ್ದ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ, ಬಹಿಷ್ಕಾರದ ಬೇಗೆಗೆ ಬೆಂದು ನೆಲಕಚ್ಚುವ ಹಾಗೆ ಕಾಣುತ್ತಿದೆ. ಅಸಹಿಷ್ಣುತೆ ಮಾತುಗಳನ್ನಾಡಿ ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿರುವ ಅಮೀರ್ ಖಾನ್ ಒಂದು ಕಡೆಯಾದರೆ, ನನ್ನ ಸಿನಿಮಾ ನೋಡುವ ಅಗತ್ಯವಿಲ್ಲ ಎಂದು ವಿವಾದದ ಹೇಳಿಕೆ ನೀಡಿ ಸಿನಿ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿರುವ ಕರೀನಾ ಕಪೂರ್ ನಟಿಸಿರುವ ಸಿನಿಮಾ ಲಾಲ್ ಸಿಂಗ್ ಚಡ್ಡಾ ಮೊದಲ ದಿನವೇ ಕಮಾಲ್ ಮಾಡುವಲ್ಲಿ ಸೋತಿದೆ.
ಸುಮಾರು 180 ಕೋಟಿ ಬಜೆಟ್‌ನಲ್ಲಿ ರೆಡಿಯಾಗಿರುವ ಸಿನಿಮಾದಲ್ಲಿ ಸಿಖ್ ಸಮುದಾಯಕ್ಕೆ ಹಾಗೂ ಭಾರತೀಯ ಸೇನೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದೆ. ಭಾರತೀಯ ಸೇನೆ ಹಾಗೂ ಸಿಖ್ ಸಮುದಾಯವನ್ನು ಅವಮಾನಿಸುವ ಚಿತ್ರವನ್ನು ಬಹಿಷ್ಕರಿಸಿ ಎಂದು ಅನೇಕ ದಿಗ್ಗಜರು ಕರೆ ನೀಡಿದ್ದರು.
ಸಿನಿಮಾ ಮೊದಲ ದಿನ ಗಲ್ಲಾ ಪೆಟ್ಟಿಗೆಯನ್ನು ಚಿಂದಿ ಮಾಡುತ್ತೆ, ದಾಖಲೆ ಬರೆಯುತ್ತೆ ಎಂದೆಲ್ಲಾ ಹೇಳಲಾಗಿತ್ತಾದರೂ, ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ 11 ಕೋಟಿಗಳಷ್ಟೇ. ನಿನಿಮಾ ಬಜೆಟ್‌ಗೆ ಹಾಗೂ ಮೊದಲ ದಿನದ ಗಳಿಕೆಗೆ ಹೋಲಿಸಿದರೆ ಈ ಸಿನಿಮಾ ದೊಡ್ಡ ಪ್ಲಾಫ್ ಆಗುವುದರಲ್ಲಿ ಸಂಶಯವಿಲ್ಲ. ವಾರಾಂತ್ಯದಲ್ಲಿ ಸಿನಿಮಾ ಹೇಗೆ ಗಳಿಕೆ ಮಾಡುತ್ತೆ ಎಂಬುದನ್ನು ಕಾದು ನೋಡಬೇಕಿದೆ.
Public Response Is Loud And Clear Only 7 People Are Watching Aamir Khan #LaalSinghChaddha In 300 + People Capacity Multiplex Threatre
Watch Full Video Retweet To Reach Maximum People #BoycottLalSinghChaddha pic.twitter.com/UylDJ5mvLE
— Arnav Raj (@Arnav__Raj) August 11, 2022