ರಸ್ತೆ ಗುಂಡಿಯಲ್ಲಿ ಸ್ನಾನ, ಯೋಗಾಸನ ಮಾಡುವ ಮೂಲಕ ಕೇರಳದ ಮಲಪ್ಪುರಂನ ಹಂಝಾ ಎಂಬವರು ಕಳಪೆ ರಸ್ತೆ ವಿರುದ್ಧ ವಿನೂತನ ಪ್ರತಿಭಟನೆ ಮಾಡಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾದ ಹಮ್ಜ ಪೊರಲಿ ಹಾಗೂ ಅಝರ್ ಮಹಮ್ಮದ್ ಅವರು ಈ ಪ್ರತಿಭಟನೆ ನಡೆಸಿದ್ದು, ಕಳೆದ ಭಾನುವಾರದಂದು ಬೆಳ್ಳಂಬೆಳಗ್ಗೆ ಬಕೆಟ್, ಮಗ್, ಸೋಪ್ ಹಾಗೂ ಟವಲ್ ಹಿಡಿದು ರಸ್ತೆಗೆ ಇಳಿದಿದ್ದಾರೆ.
ಸಂಪೂರ್ಣವಾಗಿ ಹದಗೆಟ್ಟಿರುವ ಪಂಡಿಕ್ಕಡ ಹಾಗೂ ಪಾಲಕ್ಕಾಡ್ ಸಂಪರ್ಕ ರಸ್ತೆಯನ್ನು ಇವರು ತಮ್ಮ ಪ್ರತಿಭಟನೆಗೆ ಆಯ್ದುಕೊಂಡಿದ್ದು, ಮಳೆನೀರಿನಿಂದ ತುಂಬಿದ್ದ ಗುಂಡಿಯಲ್ಲೇ ಸ್ನಾನ, ಯೋಗ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿಮುಟ್ಟಿಸಿದ್ದಾರೆ.
