ತಾಯಿ ಪ್ರೀತಿಗೆ ಸರಿಸಾಟಿಯೆಂಬುದು ಬೇರೊಂದಿಲ್ಲ. ಮನುಷ್ಯನಾಗಲಿ, ಪ್ರಾಣಿಗಳಾಗಲಿ ತನ್ನ ಮಕ್ಕಳಿಗಾಗಿ ತಾಯಿ ಎಂತಹಾ ತ್ಯಾಗಕ್ಕೂ ಸಿದ್ದಳಾಗಿರುತ್ತಾಳೆ.
ಇದೀಗ ವಿಡಿಯೋವೊಂದು ವೈರಲ್ ಆಗಿದ್ದು ಒರಾಂಗುಟನ್ ಒಂದು ಹುಲಿ ಮರಿಗಳಿಗೆ ತಾಯಿ ಪ್ರೀತಿ ತೋರುತ್ತಿರುವ ವಿಡಿಯೋ ಇದಾಗಿದೆ. ಒರಾಂಗುಟಾನ್ ತನ್ನದೇ ಮಕ್ಕಳಂತೆ ಹುಲಿ ಮರಿಗಳಿಗೆ ಮುದ್ದು ಮಾಡುತ್ತಿರೋದು ಈ ವಿಡಿಯೋದಲ್ಲಿ ಸೆರೆಯಾಗಿದೆ.
ಆನಂದ್ ಮಹೀಂದ್ರ ಅವರು ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮನುಷ್ಯ ಜಾತಿ, ಮತ, ಪಂಥ ಎಂದು ಹೊಡೆದಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಈ ವಿಡಿಯೋದಿಂದ ಕಲಿಯುವುದು ಸಾಕಷ್ಟಿದೆ.
Sometimes you feel like your kids belong to a different species but you’re crazy about them nevertheless! 😊 pic.twitter.com/rD9IGohPQq
— anand mahindra (@anandmahindra) August 7, 2022