ಸೆಲ್ಫಿ ಹುಚ್ಚಿಗೆ ಅದೆಷ್ಟೋ ಜನ ಜೀವ ಕಳೆದುಕೊಂಡಿರುವ ಬಗ್ಗೆ ನಾವು ಆಗಾಗ ಸುದ್ದಿ ಕೇಳುತ್ತಿರುತ್ತೇವೆ. ಸೆಲ್ಪಿಗಾಗಿ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡೋದು, ಸಮಯ ಸಂದರ್ಭ ಯಾವುದೇ ಇರಲಿ ಸೆಲ್ಫಿ ಬೇಕು ಎನ್ನುವ ಅದೆಪ್ಟೋ ಮಂದಿ ನಮ್ಮ ನಡುವೆಯೇ ಇದ್ದಾರೆ.
ಆದರೆ ಈ ಸೆಲ್ಫೀ ಕ್ರೇಜ್‌ಗೆ ಪ್ರಾಣವನ್ನೇ ಮುಡಿಪಾಗಿಡೋದು ನಿಜಕ್ಕೂ ಅಪಾಯಕಾರಿ ಸಾಹಸ. ಇದೀಗ ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆನೆಗಳ ಹಿಂಡಿನ ಸೆಲ್ಫಿ ತೆಗೆಯುವ ಅಪಾಯಕಾರಿ ಸಾಹಸಕ್ಕೆ ಯುವಕನೋರ್ವ ಪ್ರಯತ್ನಿಸಿರೋದು ಈ ವಿಡಿಯೋದಲ್ಲಿದೆ.
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಸ್ತೆಯಲ್ಲಿ ಆನೆಗಳ ಹಿಂಡು ಬರುತ್ತಿರೋದನ್ನು ಗಮನಿಸಿದ ಯುವಕ ತನ್ನ ವಾಹನದಿಂದ ಇಳಿದು ಅದರತ್ತ ತೆರಳಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾನೆ. ಆದರೆ ಆ ಆನೆಗಳ ಹಿಂಡಿನಲ್ಲಿ ಮರಿ ಆನೆಗಳು ಇದ್ದಿದ್ದರಿಂದ ಆನೆಗಳ ಹಿಂಡು ತಮ್ಮ ಮರಿಗಳ ರಕ್ಷಣೆಗಾಗಿ ಯುವಕನನ್ನು ಓಡಿಸಿಕೊಂಡು ಬಂದಿದೆ.
ಅಪಾಯದ ಮುನ್ಸೂಚನೆ ಅರಿತ ಯುವಕ ಪ್ರಾಣ ರಕ್ಷಣೆಗಾಗಿ ಅಲ್ಲಿಂದ ಓಡಿದ್ದಾನೆ. ಆನೆಗಳು ಯಾಕೋ ಮನಸು ಮಾಡಿ ಯುವಕನನ್ನು ಬಿಟ್ಟು ತಮ್ಮ ಪಾಡಿಗೆ ತಾವು ಕಾಡಿನ ದಾರಿ ಹಿಡಿದಿದೆ. ಯುವಕ ಸ್ಪಲ್ಪ ತಡಮಾಡಿದ್ದರೂ ಆನೆಗಳ ಗುಂಪು ಆತನನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು. ಸಮಯಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡಿದ್ದಾನೆ.
Selfie craze with wildlife can be deadly. These people were simply lucky that these gentle giants chose to pardon their behaviour. Otherwise, it does not take much for mighty elephants to teach people a lesson. video-shared pic.twitter.com/tdxxIDlA03
— Supriya Sahu IAS (@supriyasahuias) August 6, 2022