ಹಾವುಗಳು ಸಾಮಾನ್ಯವಾಗಿ ಮುಂಗುಸಿ, ಇಲಿ, ಕಪ್ಪೆಗಳಂತಹ ಸಣ್ಣ ಜೀವಿಗಳ ಜೊತೆ ಕಾದಾಡೋದು ಆಥವಾ ತಿನ್ನಲು ಯತ್ನಿಸೋದನ್ನು ನಾವು ನೋಡಿರುತ್ತೇವೆ. ಹೆಬ್ಬಾವುಗಳು ದೊಡ್ಡ ಗಾತ್ರದ ಪ್ರಾಣಿಗಳನ್ನು ಹಿಡಿದು ತಿನ್ನುತ್ತವೆ. ಆದರೆ ಇಲ್ಲಿ ಸಣ್ಣ ಗಾತ್ರದ ಹಾವೊಂದು ಆಮೆಯ ಜೊತೆ ಕಾಳಗದಲ್ಲಿ ತೊಡಗಿರುವ ವಿಡಿಯೋವೊಂದು ವೈರಲ್ ಆಗಿದೆ.
ಹಾವಿಗೆ ತುಂಬ ಹಸಿದಿತ್ತೋ ಏನೋ ಏಕಾಏಕಿ ದೊಡ್ಡ ಗಾತ್ರದ ಆಮೆಯ ಕುತ್ತಿಗೆಯ ಮೇಲೆ ದಾಳಿ ಮಾಡಿ ತಿನ್ನಲು ಯತ್ನಿಸಿದೆ. ಹಾವು ದಾಳಿ ಮಾಡುತ್ತಿರೋದನ್ನು ಅರಿತ ಆಮೆ ತನ್ನ ಕುತ್ತಿಗೆಯನ್ನು ಒಮ್ಮೆಗೆ ಒಳಗೆ ಎಳೆದುಕೊಂಡಿದ್ದು, ಹಾವಿನ ತಲೆ ಆಮೆಯ ಕುತ್ತಿಗೆಯ ಭಾಗದಲ್ಲಿ ಸಿಲುಕಿಕೊಂಡಿದೆ.
ಹಾವಿಗೆ ಎಷ್ಟೇ ಪ್ರಯತ್ನಪಟ್ಟರೂ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದ್ದಕ್ಕಿದ್ದಂತೆ ಆಮೆಯು ಮಗುಚಿಬಿದ್ದು ಹಾವನ್ನು ತನ್ನ ಬಾಯಿಂದ ಕಚ್ಚಿ ಹಿಡಿದುಕೊಂಡಿದೆ. ಬಹಳ ಪ್ರಯತ್ನ ಪಟ್ಟ ನಂತರ ಆಮೆಯ ಹಿಡಿತದಿಂದ ತಪ್ಪಿಸಿಕೊಂಡು ಜೀವ ಉಳಿದರೆ ಸಾಕಪ್ಪ ಎಂದು ಹಾವು ಅಲ್ಲಿಂದ ವೇಗವಾಗಿ ಹೋಗಿದೆ.
Cobra failed to hunt turtle, Viral Video pic.twitter.com/QYNKxre4LF
— Ashutosh Tiwari (@tiwari_ashu11) August 8, 2022