ನಾಲ್ಕು ವರ್ಷಗಳ ಕಾಲ ಲಿವ್-ಇನ್-ರಿಲೇಶನ್‌ಶಿಪ್‌ನಲ್ಲಿದ್ದು ಮದುವೆಗೆ ನಿರಾಕರಿಸಿದ ಪ್ರೇಮಿಯನ್ನು ಪ್ರೇಯಸಿ ಕತ್ತು ಕುಯ್ದು ಕೊಂದು ಸೂಟ್ಕೇಸ್ನಲ್ಲಿ ತುಂಬಿರುವ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ.
ಗಾಜಿಯಾಬಾದ್‌ನ ತಿಲಾ ಮೋರ್ ಪೊಲೀಸ್ ಠಾಣಾ ವ್ಯಾಪ್ತಿಯ ತುಳಸಿನಿಕೇತನ ಪ್ರದೇಶದಲ್ಲಿ ಘಟನೆ ನಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಹಿಂದೂ ಸಮುದಾಯದ ಮಹಿಳೆ ಹಾಗೂ ಮುಸ್ಲಿಂ ಸಮುದಾಯದ ಫಿರೋಜ್ ಎಂಬಾತ ಲಿವ್-ಇನ್-ರಿಲೇಶನ್ಶಿಪ್‌ನಲ್ಲಿದ್ದರು.
ಮಹಿಳೆಯು ಕೆಲವು ದಿನಗಳ ಹಿಂದೆ ತನ್ನನ್ನು ಮದುವೆಯಾಗುವಂತೆ ಯುವಕನಲ್ಲಿ ಕೇಳಿಕೊಂಡಿದ್ದು, ಇದಕ್ಕೆ ಯುವಕ ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಯುವತಿ ಚಾಕುವಿನಿಂದ ಆತನ ಕತ್ತು ಸೀಳಿ ಹತ್ಯೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಮೃತದೇಹ ಸಾಗಿಸಲು ದೊಡ್ಡ ಸೂಟ್ಕೇಸ್ ಖರೀದಿಸಿ ಅದರಲ್ಲಿ ಮೃತದೇಹ ತುಂಬಿದ್ದಾಳೆ.
ಇನ್ನೇನು ಮೃತದೇಹ ತುಂಬಿದ ಸೂಟ್‌ಕೇಸ್ ಎಳೆದುಕೊಂಡು ಹೊರಹೋಗುತ್ತಿದ್ದಾಗ ಪೊಲೀಸರು ಗಮನಿಸಿದ್ದಾರೆ. ಆಕೆಯ ಚಲನವಲನಗಳಿಂದ ಅನುಮಾನ ಬಂದು ಆಕೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಸೂಟ್ಕೇಸ್ ತಪಾಸಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.
ಆರೋಪಿ ಹಿಂದೂ ಮಹಿಳೆಗೆ ಅದಾಗಲೇ ಮದುವೆಯಾಗಿತ್ತು, ಮುಸ್ಲಿಂ ಯುವಕನ ಪ್ರೇಮಪಾಶಕ್ಕೆ ಬಿದ್ದು ನಾಲ್ಕು ವರ್ಷಗಳ ಹಿಂದೆ ಪತಿಯನ್ನು ಬಿಟ್ಟು ಈ ಯುವಕನೊಂದಿಗೆ ಲಿವ್-ಇನ್-ರಿಲೇಶನ್ಶಿಪ್ನಲ್ಲಿ ವಾಸವಿದ್ದಳು. ಯುವಕ ಕೈಕೊಡುತ್ತಿದ್ದಂತೆ ರೊಚ್ಚಿಗೆದ್ದು ಆತನನ್ನೇ ಹತ್ಯೆ ಮಾಡಿ ಜೈಲುಪಾಲಾಗಿದ್ದಾಳೆ.
Ghaziabad Update :
फिरोज की हत्या करने वाली प्रेमिका प्रीति ने लाश को सूटकेस में डाला। वह गाजियाबाद रेलवे स्टेशन पर किसी भी ट्रेन में इस सूटकेस को रखने जा रही थी, तभी पुलिस ने पकड लिया। pic.twitter.com/Gjj3NhtZOz— Sachin Gupta | सचिन गुप्ता (@sachingupta787) August 8, 2022
ಈ ನಡುವೆ ಪ್ರಕರಣವನ್ನು ‘ಲವ್ ಜಿಹಾದ್’ ಎಂದೂ ಹೇಳಲಾಗುತ್ತಿದ್ದು ಕೃತ್ಯವೆಸಗಿರುವ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.