ವಾಹನದ ಮೇಲೆ ನಿಂತು ಡಿಜೆ ಹಾಕಿ ನೃತ್ಯ ಮಾಡುತ್ತಿದ್ದ ಯುವಕರ ಗುಂಪಿಗೆ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿ ತಗುಲಿ ಭೀಕರ ಅವಘಡ ಸಂಭವಿಸಿದೆ. ಇಂದೋರ್‌ನಲ್ಲಿ ಘಟನೆ ನಡೆದಿದ್ದು, ವಿದ್ಯುತ್ ತಗುಲಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟರೆ, ಮೂವರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಕನ್ವರ್ ಯಾತ್ರೆಯಿಂದ ಹಿಂದಿರುಗುತ್ತಿದ್ದ ಶಿವಭಕ್ತರ ಗುಂಪು ಸಂಭ್ರಮದಿಂದ ಡಿಜೆ ಹಾಕಿ ಕುಣಿದುಕೊಂಡು ಸಾಗುತ್ತಿತ್ತು. ಈ ವೇಳೆ ಕೆಲವರು ವಾಹನಗಳ ಮೇಲೆ ಹತ್ತಿ ಡಿಜೆ ಹಾಡಿಗೆ ನೃತ್ಯ ಮಾಡುತ್ತಿದ್ದರು. ಈ ವೇಳೆ ಒಬ್ಬನಿಗೆ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿ ತಗುಲಿದೆ, ಆತನ ಅಕ್ಕಪಕ್ಕ ಇದ್ದ ಇತರರಿಗೂ ವಿದ್ಯುತ್ ಸ್ಪರ್ಶವಾಗಿದ್ದು ವಿದ್ಯುತ್ ಆಘಾತಕ್ಕೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿದ್ಯುತ್ ತಗುಲುತ್ತಿದ್ದಂತೆ ಕೆಲವರು ವಾಹನದಿಂದ ಹಾರಿ ಪ್ರಾಣ ರಕ್ಷಿಸಿಕೊಂಡಿದ್ದಾರೆ. ದುರ್ಘಟನೆಯ ವಿಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ. ಅಜಾರುಕತೆಯಿಂದ ವಾಹನದ ಮೇಲೆ ಹತ್ತಿ ನೃತ್ಯಮಾಡಿದ್ದೇ ಈ ದುರ್ಘಟನೆಗೆ ಕಾರಣ ಎಂಬುದು ಮೇಲ್ನೋಟದಿಂದಲೇ ತಿಳಿದುಬರುತ್ತಿದೆ.
इंदौर के पास महू में डीजे पर चढ़कर नाच रहे युवकों को लगा करंट, एक-दूसरे का हाथ लगने से चार आए चपेट में, एक की मौत #Mhow #Indore #DJ #KawarYatra #MPNews #MadhyaPradesh https://t.co/qZBu3nrLY1 pic.twitter.com/rT6c46qGlu
— Amar Ujala (@AmarUjalaNews) August 8, 2022