ಚಿಕ್ಕಮಗಳೂರು: ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಗೋಕಳ್ಳತನ, ಅಕ್ರಮ ಗೋಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಚಿಕ್ಕಮಗಳೂರು ನಗರಸಭೆ ಉತ್ತರಪ್ರದೇಶ ಯೋಗಿ ಮಾದರಿಯಲ್ಲಿಯೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ…
ಕೆಲಸಮಯಗಳ ಹಿಂದಷ್ಟೇ ಅಕ್ರಮ ಗೋವಧೆ ನಡೆಸುವ ಸ್ಥಳಗಳನ್ನು ಬುಲ್ಡೋಜರ್‌ನಿಂದ ಧ್ವಂಸ ಮಾಡಿಸಿದ್ದ ನಗರಸಭೆ ಅಧಿಕಾರಿಗಳು, ಇದೀಗ ಗೋಹತ್ಯೆಯಲ್ಲಿ ಭಾಗಿಯಾಗುವವರ ಮನೆಯ ವಿದ್ಯುತ್, ನೀರಿನ ಸಂಪರ್ಕಗಳನ್ನು ಕಟ್ ಮಾಡಲು ಮುಂದಾಗಿದ್ದಾರೆ.
ಅಕ್ರಮ ಗೋಹತ್ಯೆ, ಮಾರಾಟದಲ್ಲಿ ಭಾಗಿಯಾಗುವವರ ಮನೆಯ ದಾಖಲೆಗಳನ್ನು ರದ್ದು ಮಾಡಿ, ಅದನ್ನು ನಗರಸಭೆ ಆಸ್ತಿ ಎಂದು ಪರಿವರ್ತನೆ ಮಾಡುವ ಬಗ್ಗೆಯೂ ಚಿಂತನೆ ನಡೆಸುತ್ತಿದೆ. ಗೋಹಂತಕರ ಮೇಲೆ ನಗರ ಸಭೆ ತೆಗೆದುಕೊಂಡಿರುವ ಕಠಿಣಕ್ರಮದ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
