ಮಹಿಳೆ ಜೊತೆ ಅಸಭ್ಯ ವರ್ತನೆ, ನಿಂದನೆ ಮತ್ತು ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಮನೆಯ ಮೇಲೆ ಯೋಗಿ ಸರ್ಕಾರ ಬುಲ್ಡೋಜರ್ ದಾಳಿ ನಡೆಸಿ ಕೆಡವಿದೆ.
ನೋಯ್ಡಾದ ಸೆಕ್ಟರ್-93 ಬಿ ಯಲ್ಲಿನ ಗ್ರ್ಯಾಂಡ್ ಒಮ್ಯಾಕ್ಸ್ ಸೊಸೈಟಿಗೆ ಪೊಲೀಸ್ ಸಿಬ್ಬಂದಿಯೊಂದಿಗೆ ತಲುಪಿದ ಅಧಿಕಾರಿಗಳು, ಬಿಜೆಪಿ ಕಿಸಾನ್ ಮೋರ್ಚಾ ನಾಯಕ ಶ್ರೀಕಾಂತ್ ತ್ಯಾಗಿಗೆ ಸೇರಿದ್ದ ಅಕ್ರಮ ಕಟ್ಟಡವನ್ನು ನೆಲಸಮ ಮಾಡಿದ್ದಾರೆ
ಕೆಲ ದಿನಗಳ ಹಿಂದಷ್ಟೇ ಶ್ರೀಕಾಂತ್ ತ್ಯಾಗಿ ಹಾಗೂ ಮಹಿಳೆಯ ನಡುವೆ ಮರಗಳನ್ನು ನೆಡುವ ವಿಷಯದಲ್ಲಿ ಜಗಳ ನಡೆದಿತ್ತು. ಈ ವೇಳೆ ಶ್ರೀಕಾಂತ್ ತ್ಯಾಗಿ ಮಹಿಳೆಗೆ ನಿಂದನೆಯನ್ನು ಮಾಡಿದ್ದಲ್ಲದೆ, ದೌರ್ಜನ್ಯವನ್ನು ನಡೆಸಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಪಟ್ಟ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಘಟನೆಯ ನಂತರ ಶ್ರೀಕಾಂತ್ ತ್ಯಾಗಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 354 ಅಡಿಯಲ್ಲಿ ನೋಯ್ಡಾ ಪೊಲೀಸರು ಪ್ರಕರಣ ದಾಖಲಿಸಿದ್ದರು. ಶ್ರೀಕಾಂತ್ ತ್ಯಾಗಿ ಸೊಸೈಟಿ ನಿವಾಸಿಗಳಿಗೆ ಮೀಸಲಿಟ್ಟ ಪಾರ್ಕ್ ಅನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗದ್ದು, ಈಗ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸುವ ಮೂಲಕ ಅಧಿಕಾರಿಗಳು ಸೊಸೈಟಿ ನಿವಾಸಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
UP: Bulldozers demolish illegal construction at home of man who misbehaved with woman at Noida society
Read @ANI Story | https://t.co/K1Lns9WEYH#GrantOmaxeSociety #Demolition #ShrikantTyagi pic.twitter.com/4PBK9nrpEB
— ANI Digital (@ani_digital) August 8, 2022