ಕರ್ನಾಟಕ ಹಾಗೂ ಕೇರಳದ ಕರಾವಳಿ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಈ ಅನಿರೀಕ್ಷಿತ ಮಳೆ ಕರಾವಳಿ ಭಾಗಗಳಲ್ಲಿ ಭಾರೀ ಹಾನಿಯನ್ನೂ ಉಂಟು ಮಾಡಿದೆ.
ಅದಾಗಲೆ ಹಲವು ಸಾವುನೋವುಗಳಿಗೆ ಕಾರಣವಾಗಿರುವ ಮಳೆಯಿಂದಾಗಿ ಗುಡ್ಡ ಕುಸಿತ, ಮನೆ ಕುಸಿತದಂತಹ ಪ್ರಾಕೃತಿಕ ವಿಕೋಪಗಳು ಉಂಟಾಗುತ್ತಿದೆ. ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಭಾರೀ ಮಳೆಗೆ ಕರ್ನಾಟಕ-ಕೇರಳ ಗಡಿಭಾಗದ ಸುಂಕದಕಟ್ಟೆ ಎಂಬಲ್ಲಿ ಬೃಹತ್ ಕಟ್ಟಡವೊಂದು ತಳಸಮೇತ ಉರುಳಿಬೀಳುತ್ತಿರೋದನ್ನ ಕಾಣಬಹುದಾಗಿದೆ.
ಘಟನೆಯ ಸಂದರ್ಭದಲ್ಲಿ ಕಟ್ಟಡದಲ್ಲಿ ಯಾರೂ ಇರಲಿಲ್ಲ, ಹೀಗಾಗಿ ಯಾವುದೇ ಸಾವುನೋವು ಸಂಭವಿಸಿಲ್ಲ. ಕಟ್ಟಡ ಉರುಳಿ ಬೀಳುವ ವಿಡಿಯೋವನ್ನು ಅಲ್ಲೇ ಇದ್ದ ಸ್ಥಳೀಯರು ರೆಕಾರ್ಡ್ ಮಾಡಿದ್ದು, ವೈರಲ್ ಆಗಿದೆ.