ಕನ್ನಡದ ಬಿಗ್-ಬಾಸ್ OTT ಕಾರ್ಯಕ್ರಮ ಪ್ರಾರಂಭವಾಗಿದೆ. ಕಾರ್ಯಕ್ರಮ ನಡೆಸಿಕೊಡುವ ಕಿಚ್ಚ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳನ್ನು ಮನೆಯೊಳಕ್ಕೆ ಕಳಿಸಿಕೊಟ್ಟಿದ್ದಾರೆ. ಒಂದು ಕಡೆ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಇತ್ತ ಸಾಮಾಜಿಕ ಜಾಲತಾಣದಲ್ಲಿ ಅಲ್ಲೋಲ ಕಲ್ಲೋಲವಾಗಿದೆ.
ಬಿಗ್‌ಬಾಸ್ ಒಟಿಟಿಗೆ ಸೋನು ಶ್ರೀನಿವಾಸ್ ಗೌಡಳನ್ನು ಆಯ್ಕೆ ಮಾಡಿರೋದೆ ಇದಕ್ಕೆಲ್ಲ ಕಾರಣ. ಸೋನು ಶ್ರೀನಿವಾಸ್ ಗೌಡ ಬಿಗ್‌ಬಾಸ್ ಒಟಿಟಿ ಕನ್ನಡದ ಎರಡನೇ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಶ ಮಾಡಿದ್ದಾಳೆ. ಆಕೆಯನ್ನು ಕಿಚ್ಚ ಸುದೀಪ್ ವೇದಿಕೆಗೆ ಬರಮಾಡಿಕೊಳ್ಳುತ್ತಿದ್ದಂತೆ ಬಿಗ್‌ಬಾಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಸುರಿಮಳೆಯೇ ಸುರಿಯುತ್ತಿದೆ.
ಇಂತಹ ಮೂರು ಬಿಟ್ಟವರನ್ನು ಅದು ಹೇಗೆ ಬಿಗ್‌ಬಾಸ್ ಮನೆಯೊಳಗೆ ಕಳುಹಿಸುತ್ತೀರಾ? ಆಕೆ ಮಾಡಿರುವುದಾದರೂ ಏನು? ಅವಳಿಂದ ಜನರಿಗೆ ಸಿಗುವ ಸ್ಫೂರ್ತಿಯಾದರೂ ಎಂಥದ್ದು? ಎಂದೆಲ್ಲಾ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ನಡೆದುಕೊಳ್ಳುವ ಸೋನುಗೌಡಳನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸಿ ಕಾರ್ಯಕ್ರಮ ಜನಪ್ರಿಯತೆಯನ್ನು ಮಣ್ಣುಪಾಲು ಮಾಡಿಕೊಂಡಿದ್ದೀರಿ ಎಂದು ಅಸಮಾಧಾನ ಹೊರಹಾಕಿದ್ದಾರೆ. ಬಿಗ್ಬಾಸ್ಗೆ ಅವಳು ಅರ್ಹ ಸ್ಪರ್ಧಿಯಲ್ಲ. ಆಕೆಯನ್ನು ಆಯ್ಕೆ ಮಾಡಿರೋದು ನಿಜವಾಗಿಯೂ ನಿರಾಶದಾಯಕ ಎಂದು ಬಿಗ್‌ಬಾಸ್ ಒಟಿಟಿ ಕಾರ್ಯಕ್ರಮ ಬಹಿಷ್ಕರಿಸಲು ಮುಂದಾಗಿದ್ದಾರೆ.