fbpx

ಮೀನನ್ನು ಭೇಟೆಯಾಡಲು ಹೊಂಚುಹಾಕುತ್ತಿದ್ದ ಹಕ್ಕಿಯನ್ನೇ ಭೇಟೆಯಾಡಿದ ಮೀನು! ವೈರಲ್ ವಿಡಿಯೋ ನೋಡಿ

ಹಕ್ಕಿಗಳು ಮೀನುಗಳನ್ನು ಭೇಟೆಯಾಡುವ ಸಾಕಷ್ಟು ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಭೇಟೆಗಾಗಿ ಹೊಂಚು ಹಾಕಿ ಭೇಟೆ ಕಣ್ಣಿಗೆ ಬಿದ್ದ ಕೂಡಲೇ ಹಾರಿಬಂದು ಎತ್ತಾಕಿಕೊಂಡು ಹೋಗುವ ಸಾಕಷ್ಟು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಗುತ್ತವೆ.

ಆದರೆ ಇಲ್ಲೊಂದು ಹಕ್ಕಿ ಮೀನನ್ನು ಭೇಟೆಯಾಡಲು ಹೋಗಿ ತಾನೇ ಮೀನಿಗೆ ಆಹಾರವಾದ ವಿಡಿಯೋ ವೈರಲ್ ಆಗಿದೆ. ಸಮುದ್ರದ ಮೇಲ್ಭಾಗದಲ್ಲಿ ಭೇಟೆಯನ್ನು ಹುಡುಕುತ್ತಾ ಹಾರುತ್ತಿರುವ ಹಕ್ಕಿಯನ್ನು ಏಕಾಏಕಿ ನೀರಿನಿಂದ ಹಾರಿ ಬಂದ ದೊಡ್ಡ ಗಾತ್ರದ ಮೀನು ಹಿಡಿಯುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಸಾಂತ್ ನಂದ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಮೀನು ಹೊಂಚು ಹಾಕಿ ಹಕ್ಕಿಯನ್ನು ಹಿಡಿಯುವ ವಿಡಿಯೋ ಇಲ್ಲಿದೆ ನೋಡಿ,

video

error: Content is protected !!