ಪಶ್ಚಿಮ ಬಂಗಾಳ ನಟಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ದುರ್ಗಾದೇವಿಯ ಅವತಾರ ಹಾಕಿ ಪೋಸ್ ಕೊಟ್ಟಿರುವುದಕ್ಕೆ ಜೀವಬೆದರಿಕೆ ಎದುರಿಸುತ್ತಿದ್ದಾರಂತೆ.
ಮಹಾಲಯ ನಿಮಿತ್ತ ದುರ್ಗಾದೇವಿಯ ವೇಷ ಧರಿಸಿ ಪೋಟೋಶೂಟ್ ಮಾಡಿಸಿಕೊಂಡ ಪಶ್ಚಿಮ ಬಂಗಾಳ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಅವರಿಗೆ ಜೀವ ಬೆದರಿಕೆಗಳು ಬರುತ್ತಿದೆಯಂತೆ. ಬೆಂಗಾಲಿ ನಟಿಯೂ ಆಗಿರುವ ನುಸ್ರತ್ ಅವರು ದುರ್ಗೆಯ ಅವತಾರದಲ್ಲಿ ವಿಡಿಯೋ ರೆಕಾರ್ಡ್ ಮಾಡಿಸಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದರು.
ತೃಣಮೂಲ ಕಾಂಗ್ರೆಸ್ ಸಂಸದೆಯಾಗಿರುವ ನುಸ್ರತ್ ಜಹಾನ್ ಮುಸ್ಲಿಂ ಪರಿವಾರದಲ್ಲಿ ಹುಟ್ಟಿದ್ದರೂ ನಿಖಿಲ್ ಜೈನ್ ಎಂಬವರನ್ನು ವಿವಾಹವಾಗಿದ್ದಾರೆ. ಅವರ ಮದುವೆಯ ಸಂದರ್ಭದಲ್ಲಿಯೂ ಸಾಕಷ್ಟು ಕಟ್ಟರಪಂಥೀಯ ಮುಸ್ಲಿಮರು ಜೀವ ಬೆದರಿಕೆ ಹಾಕಿದ್ದರು.
ಮದುವೆಯ ಸಂದರ್ಭದಲ್ಲಿ ಕುಂಕುಮ, ಮಂಗಳಸೂತ್ರ ಧರಿಸಿ ದುರ್ಗಾಪೂಜೆಯಲ್ಲಿ ಪಾಲ್ಗೊಂಡಿದ್ದಕ್ಕೆ ಮುಸ್ಲಿಂ ಕಟ್ಟರಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ತಮ್ಮ ದುರ್ಗಾ ಅವತಾರದ ಪೋಟೋಶೂಟ್ಗೆ ಜೀವ ಬೆದರಿಕೆ ಬರುತ್ತಿದೆಯಂತೆ.
ನಿನಗೆ ಅಲ್ಹಾ ಅಂದರೆ ಭಯವಿಲ್ಲವೇ, ನಿನ್ನ ಸಾವಿನ ಸಮಯ ಹತ್ತಿರ ಬಂದಿದೆ, ನಿನ್ನ ದೇಹವನ್ನು ಮುಚ್ಚಿಡಲು ಆಗುವುದಿಲ್ಲವೇ, ಇ’ಸ್ಲಾಂಗೆ ಕಳಂಕ ನೀನು, ನಿನ್ನ ಅ’ತ್ಯಾಚಾರ ಮಾಡೋದಾಗಿ ಬೆದರಿಕೆ ಕಮೆಂಟ್ಗಳನ್ನು ಮಾಡುತ್ತಿದ್ದಾರಂತೆ.
ಸದ್ಯ ಲಂಡನ್ನಲ್ಲಿ ಬಂಗಾಳಿ ಚಲನಚಿತ್ರದ ಶೂಟಿಂಗ್ನಲ್ಲಿ ನಿರತರಾಗಿರುವ ನಟಿ, ತಮ್ಮ ಜೀವಕ್ಕೆ ಅಪಾಯವಿದ್ದು ತಮಗೆ ರಕ್ಷಣೆ ನೀಡುವಂತೆ ಲಂಡನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಇದರ ಜತೆಗೆ ಬಂಗಾಳ ಸರ್ಕಾರವನ್ನೂ ಕೋರಿದ್ದಾರೆ.