ಸಾರ್ವಜನಿಕ ಪಾರ್ಕ್ನಲ್ಲಿ ತುಂಡುಡುಗೆ ತೊಟ್ಟು ಅಸಭ್ಯ ವರ್ತನೆ ತೋರಿದ ಕಿರಿಕ್ ಪಾರ್ಟಿ ನಟಿ ಸಂಯುಕ್ತ ಹೆಗ್ಡೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಅಗರ ಉದ್ಯಾನವನದಲ್ಲಿ ಗೆಳತಿಯರೊಂದಿಗೆ ಆಗಮಿಸಿದ್ದ ಸಂಯುಕ್ತ ಹೆಗಡೆ ಅಸಭ್ಯವಾಗಿ ವರ್ತಿಸಿದ್ದು, ವಾಯುವಿಹಾರಕ್ಕೆಂದು ಬಂದಿದ್ದ ಜನರೇ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಉದ್ಯಾನವನದಲ್ಲಿ ಸಂಯುಕ್ತ ಹೆಗಡೆ ಮತ್ತಾಕೆಯ ಕೆಲ ಗೆಳತಿಯರು ತುಂಡುಡುಗೆ ಹಾಕಿಕೊಂಡು ಹುಲಾ ಲೂಪ್ ಡ್ಯಾನ್ಸ್ ಮಾಡಿದ್ದು, ದಿನಂಪ್ರತಿ ಉದ್ಯಾನವನಕ್ಕೆ ವಾಯುವಿಹಾರಕ್ಕೆ ಬರೋ ಜನರಿಗೆ ಇದರಿಂದ ಮುಜುಗರವಾಗಿದೆ. ಸರಿಯಾದ ಬಟ್ಟೆ ತೊಟ್ಟು ವ್ಯಾಯಾಮ ಮಾಡುವಂತೆ ಅವರು ಆಕೆಯನ್ನು ಕೇಳಿದ್ರೆ, ಆಕೆ ಅವರ ವಿರುದ್ಧವೇ ರೇಗಾಡಿದ್ದಾಳೆ.
ಇದರಿಂದ ವಾಗ್ವಾದ ಉಂಟಾಗಿ ಉದ್ಯಾನಕ್ಕೆ ಸ್ಥಳೀಯರ ದಂಡೇ ಹರಿದು ಬಂದಿದೆ. ಕಿರಿಕ್ ಹುಡುಗಿಯ ವಿರುದ್ಧ ಅಲ್ಲಿದ್ದ ಜನರು ಧಿಕ್ಕಾರ ಕೂಗಿದ್ದಾರೆ, ಉದ್ಯಾನವನದ ಗೇಟ್ ಕ್ಲೋಸ್ ಮಾಡಿದ ಸ್ಥಳೀಯರು ಪೋಲಿಸರನ್ನು ಕರೆಸಿದ್ದಾರೆ.
ಈ ಸಂದರ್ಭದಲ್ಲಿ ಸೋಶಿಯಲ್ ಮಿಡಿಯಾದಲ್ಲಿ ಲೈವ್ ಬಂದ ಕಿರಿಕ್ ಹುಡುಗಿ, ಸ್ಪೋರ್ಟ್ಸ್ ಬ್ರಾ ಧರಿಸಿ ವ್ಯಾಯಾಮ ಮಾಡಿದರೆ ಏನು ತಪ್ಪು ಎಂದು ಪ್ರಶ್ನಿಸಿದ್ದಾರೆ. ಇದಕ್ಕಾಗಿ ಜನರೆಲ್ಲ ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಘಟನೆ ಕೈಮೀರಿ ಹೋಗುವ ಮೊದಲೇ ಅಲ್ಲಿಗೆ ಪೊಲೀಸರು ಎರಡೂ ಕಡೆಯವರನ್ನು ಸಮಾಧಾನ ಪಡಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಆದರೆ ಜನರು ನಟಿಯ ವಿರುದ್ಧ ಧಿಕ್ಕಾರ ಕೂಗಿದ್ದಾರೆ, ನಟಿಯೂ ಜನರ ವಿರುದ್ಧ ರೇಗಾಟ ಮುಂದುವರೆಸಿದ್ದಾಳೆ. ಪೋಲೀಸರ ಮುಂದೆಯೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದು, ಕೊನೆಗೆ ಪೋಲೀಸರು ನಟಿಯನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ.
Watch Video
