fbpx

ತನ್ನ ತಾಯಿ ಮೇಲೆ ಬೆತ್ತ ಬೀಸಿದ ವ್ಯಕ್ತಿಯ ಎದೆಗೆ ಒದ್ದು ನೆಲಕ್ಕೆ ಕೆಡವಿದ ಕರು, ವೈರಲ್ ವಿಡಿಯೋ ನೋಡಿ

ಕರ್ಮ ಮಾಡಿದ್ರೆ ಅದರ ಪ್ರತಿಫಲ ಅನುಭವಿಸಲೇಬೇಕು, ಇಲ್ಲೊಬ್ಬ ವ್ಯಕ್ತಿಗೆ ತಾನು ಮಾಡಿದ ಕರ್ಮಕ್ಕೆ ತಕ್ಷಣವೇ ಪ್ರತಿಫಲ ಸಿಕ್ಕಿದೆ. ತಾಯಿ ಹಸುವಿಗೆ ಹೊಡೆದ ವ್ಯಕ್ತಿಗೆ ಅದರ ಕರು ಸರಿಯಾದ ತಿರುಗೇಟು ನೀಡಿದೆ.

ವಿಡಿಯೋದಲ್ಲಿ ವ್ಯಕ್ತಿ ಹಸುಗಳ ಹಿಂಡಿನ ಬಳಿ ನಿಂತಿರೋದನ್ನ ಕಾಣಬಹುದಾಗಿದೆ. ಹಸುಗಳನ್ನು ಕೊಟ್ಟಿಗೆಯೊಳಕ್ಕೆ ಕಳುಹಿಸಲು ವ್ಯಕ್ತಿ ಪ್ರಯತ್ನಿಸುತ್ತಿದ್ದ, ಈ ಸಂದರ್ಭದಲ್ಲಿ ಹಸುವೊಂದು ಒಳಹೋಗದೆ ಅಲ್ಲೇ ನಿಂತಿದೆ. ಹಸು ಒಳಹೋಗದಿರೋದನ್ನ ಕಂಡ ವ್ಯಕ್ತಿ ತನ್ನ ಕೈಲಿದ್ದ ಕೋಲಿನಿಂದ ಹಸುವಿಗೆ ಹೊಡೆದಿದ್ದಾನೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ತಾಯಿ ಹಸುವಿನ ಮೇಲೆ ವ್ಯಕ್ತಿ ಕೋಲಿನಿಂದ ಹೊಡೆಯುತ್ತಿದ್ದಂತೆ ಅಲ್ಲೇ ಇದ್ದ ಕರು ಹಾರಿ ತನ್ನ ಹಿಂಗಾಲಿನಿಂದ ವ್ಯಕ್ತಿಯ ಎದೆಗೆ ಒದ್ದಿದೆ. ಕರು ಹೊಡೆದ ರಭಸಕ್ಕೆ ವ್ಯಕ್ತಿ ನೆಲಕ್ಕೆ ಬಿದ್ದಿದ್ದಾನೆ.

ಐಎಫ್‌ಎಸ್ ಅಧಿಕಾರಿ‌ ಸುಶಾಂತ್ ನಂದಾ ಅವರು ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು ಸಖತ್ ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

video

error: Content is protected !!