ಚಿರತೆಯೊಂದು ಗುಡಿಸಲಿನಲ್ಲಿ ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದು, ಇದೀಗ ತಾಯಿ ಚಿರತೆ ಹಾಗೂ ನಾಲ್ಕು ಮರಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಈಗಟಪುರಿ ಎಂಬಲ್ಲಿನ ಗುಡಿಸಲೊಂದಕ್ಕೆ ನುಗ್ಗಿದ ಗರ್ಭಿಣಿ ಚಿರತೆ ಅಲ್ಲಿಯೇ ನಾಲ್ಕು ಮರಿಗಳಿಗೆ ಜನ್ಮನೀಡಿದೆ. ಈ ವಿಡಿಯೋವನ್ನು ಎಎನ್ಐ ಸುದ್ದಿಸಂಸ್ಥೆ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಪುಟಾಣಿ ಮರಿಗಳು ತುಂಟಾಟವಾಡುತ್ತಿರೋದನ್ನ ಕಾಣಬಹುದು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲಿಸಿದ್ದು, ತಾಯಿ ಚಿರತೆ ಹಾಗೂ ನಾಲ್ಕು ಮರಿಗಳು ಆರೋಗ್ಯವಾಗಿದೆ ಎಂದು ಹೇಳಿದ್ದಾರೆ.
ಮರಿಗಳು ಸಣ್ಣದಿರೋ ಕಾರಣ ಚಿರತೆಯನ್ನು ಇಲ್ಲಿಂದ ಬೇರೆ ಸುರಕ್ಷಿತ ಜಾಗಕ್ಕೆ ಸಾಗಿಸೋಕೆ ಸಾಧ್ಯವಿಲ್ಲ, ಮುಂದೆ ಪರಿಸ್ಥಿತಿ ನೋಡಿಕೊಂಡು ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಡುವ ಕೆಲಸ ಮಾಡಬೇಕಿದೆ ಎಂದಿದ್ದಾರೆ. ವೈರಲ್ ವಿಡಿಯೋ ನೋಡಿ,